ಟೋಕಿಯೋದಿಂದ ಹೊರಭಾಗದಲ್ಲಿರುವ ಜಪಾನ್ನ ಸಣ್ಣ ಪ್ರಾಂತ್ಯದಲ್ಲಿ ರಾಜ್ಯಪಾಲರ ಸ್ಥಾನಕ್ಕೆ ಸ್ಪರ್ಧಿಸಲು ಕಣಕ್ಕಿಳಿದಿದ್ದ ವ್ಯಕ್ತಿ ಜೋಕರ್ ರೀತಿ ವೇಷ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಿಬಾ ಪ್ರಿಫೆಕ್ಚರ್ ಗವರ್ನರ್ ಸ್ಪರ್ಧೆಯಲ್ಲಿದ್ದ ಯುಸೂಕೆ ಕವಾಯಿ, ಈ ರೀತಿಯ ವೇಷ ಧರಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರನ್ನ ಗೊಂದಲಕ್ಕೀಡಾಗುವಂತೆ ಮಾಡಿದ್ದಾರೆ.
ಕಾರ್ಯಕ್ರಮ ಆಯೋಜನೆ ಹಾಗೂ ತಾತ್ಕಾಲಿಕ ಉದ್ಯೋಗ ಏಜೆನ್ಸಿ ಮುಖ್ಯಸ್ಥರಾಗಿರುವ ಈ 40 ವರ್ಷದ ವ್ಯಕ್ತಿ ಜೋಕರ್ ಮಾದರಿಯಲ್ಲಿ ಮುಖಕ್ಕೆ ಪೇಟಿಂಗ್ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
https://youtu.be/sqLS8EuiuH0