ದೇಶದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಆರಂಭವಾಗಿದ್ದು ವಿವಿಧ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುತ್ತಿವೆ. ಅದರಂತೆ ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಕೂಡ ಮಾಸ್ಕ್ ಧರಿಸದೇ ಇರುವ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದಲ್ಲಿ ಅಂತವರಿಗೆ ಮುಲಾಜಿಲ್ಲದೇ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಅಲರ್ಟ್ ಆಗಿರೋದು ಅನಿವಾರ್ಯವಾಗಿದೆ. ಹೀಗಾಗಿ ಮಾಸ್ಕ್ ಧರಿಸದೇ ಇರುವ ವ್ಯಕ್ತಿಯ ಬಳಿ 200 ರೂಪಾಯಿಗಳನ್ನ ದಂಡದ ರೂಪದಲ್ಲಿ ವಸೂಲಿ ಮಾಡಿ ಎಂದು ಸೂಚನೆ ನೀಡಲಾಗಿದೆ.
ದೇಶದ ಜನತೆಗೆ ಮತ್ತೆ ಬಿಗ್ ಶಾಕ್: ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ
ವರದಿಗಳ ಪ್ರಕಾರ ಈವರೆಗೆ ತಮಿಳು ನಾಡು ಸರ್ಕಾರ ಸಾಮಾಜಿಕ ಅಂತರ ಕಾಪಾಡದ ಹಾಗೂ ಮಾಸ್ಕ್ ಧರಿಸದ ಕಾರಣಕ್ಕೆ 14 ಲಕ್ಷ ಜನರಿಂದ ಈವರೆಗೆ 13 ಕೋಟಿ ರೂಪಾಯಿ ಹಣವನ್ನ ದಂಡದ ರೂಪದಲ್ಲಿ ವಸೂಲಿ ಮಾಡಿದೆಯಂತೆ.
ಕೊರೊನಾ ವೈರಸ್ ಅಬ್ಬರಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧವಾಗಿರುವ ತಮಿಳುನಾಡು ಸರ್ಕಾರ ಚೆನ್ನೈನ ಆಸ್ಪತ್ರೆಗಳಲ್ಲಿ 4 ಸಾವಿರ ಬೆಡ್ಗಳನ್ನ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದೆ. ಅಲ್ಲದೇ ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲೂ ರೋಗಿಗಳ ಚಿಕಿತ್ಸೆಗೆ ಸಕಲ ಕ್ರಮ ಕೈಗೊಳ್ಳಲಾಗ್ತಿದೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ .