ತಮ್ಮ ಮಕ್ಕಳ ಜನ್ಮ ದಿನಾಚರಣೆಯ ಸಂಭ್ರಮವನ್ನ ಹೆಚ್ಚು ಮಾಡೋಕೆ ತಾಯಂದಿರು ಇನ್ನಿಲ್ಲದ ಪ್ರಯತ್ನ ಪಡ್ತಾರೆ. ಮಕ್ಕಳಿಗೆ ಇಷ್ಟವಾಗುವ ಉಡುಗೊರೆಗಳು, ಅವರು ಇಷ್ಟ ಪಡೋ ಖಾದ್ಯ ಹೀಗೆ ನಾನಾ ಬಗೆಯ ಸಿದ್ಧತೆಯನ್ನ ಮಾಡುತ್ತಾರೆ.
ಇದೇ ರೀತಿ ಆನ್ಲೈನ್ ಶಾಪಿಂಗ್ ಮಾಡೋದ್ರಲ್ಲಿ ಭಾರೀ ಆಸಕ್ತಿ ಹೊಂದಿದ್ದ ಪುತ್ರನ ಬರ್ತಡೇಯನ್ನು ತಾಯಿಯೊಬ್ಬಳು ಥೇಟ್ ಅಮೆಜಾನ್ ಪಾರ್ಸೆಲ್ನಂತೆ ಕಾಣುವ ರೀತಿಯಲ್ಲಿ ಕೇಕ್ ತಯಾರಿಸಿದ್ದು ಇದರ ಫೋಟೋ ನೋಡಿದ ನೆಟ್ಟಿಗರು ವ್ಹಾವ್ ಎಂದಿದ್ದಾರೆ.
ಬ್ರಿಟನ್ನ ಕೇನ್ ಇವಾನ್ಸ್ ಎಂಬಾತ ಅಮೆಜಾನ್ ಅಪ್ಲಿಕೇಶನ್ ಮೂಲಕ ಆನ್ಲೈನ್ ಶಾಪಿಂಗ್ಗಳನ್ನ ಮಾಡ್ತಾನೇ ಇರ್ತಿದ್ದ. ಹೀಗಾಗಿ ಮಗನ 24ನೇ ವರ್ಷದ ಜನ್ಮ ದಿನಕ್ಕೆ ಏನಾದರೊಂದು ವಿಶೇಷವಾದ ಸಪ್ರೈಸ್ ನೀಡಬೇಕು ಎಂದಿಕೊಂಡಿದ್ದ ತಾಯಿ ಅಮೆಜಾನ್ ಪಾರ್ಸಲ್ ಮಾದರಿಯ ಕೇಕ್ ತಯಾರಿಸಿದ್ದಾರೆ.
ಬೆಳಗ್ಗೆ ಎದ್ದೊಡನೆಯೇ ಕೇಕ್ ನೋಡಿದ ಕೇನ್, ಇದು ಅಮೆಜಾನ್ ಪಾರ್ಸಲ್ ಇರಬಹುದೆಂದೇ ಭಾವಿಸಿದ್ದಾನೆ. ಆದರೆ ಇದನ್ನ ಸೂಕ್ಷ್ಮವಾಗಿ ಗಮನಿಸಿದ ಬಳಿಕ ಕೇನ್ಗೆ ಶಾಕ್ ಆಗಿದೆ. ಈತನ ತಾಯಿ ನೀನಾ ವೃತ್ತಿಪರ ಕೇಕ್ ಡಿಸೈನರ್ ಆಗಿದ್ದು, ನೀನಾ ಕೇಕ್ ಕ್ಯಾಬಿನ್ ಎಂಬ ಬೇಕರಿಯನ್ನೂ ನಡೆಸುತ್ತಿದ್ದಾರೆ . ಈಕೆಯ ಅಮೆಜಾನ್ ಕೇಕ್ನ್ನು ಚಾಕೊಲೇಟ್ನಿಂದ ಮಾಡಲಾಗಿದೆ.