ವಾಹನಗಳ ಮೇಲೆ ತಮ್ಮ ಜಾತಿಯ ಹೆಸರನ್ನ ಹಾಕಿಸಿಕೊಳ್ಳುವ ಅಭ್ಯಾಸವುಳ್ಳವರ ವಿರುದ್ಧ ಗುರುಗಾಂವ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಗುರುಗಾಂವ್ ಟ್ರಾಫಿಕ್ ಪೊಲೀಸ್ ಉಪ ಕಮೀಷನರ್ ರಮೇಶ್ ಕುಮಾರ್ ಈ ವಿಚಾರವಾಗಿ ಮಾತನಾಡಿ, ವಾಹನಗಳ ಮೇಲೆ ಜಾತಿಯನ್ನ ಹಾಕಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಟ್ರಾಫಿಕ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪ್ರತಿ 20 ವಾಹನಗಳಲ್ಲಿ ಒಂದು ವಾಹನದ ಮೇಲಾದರೂ ಈ ರೀತಿಯ ಸ್ಟಿಕರ್ಗಳು ಕಂಡು ಬರ್ತಿದೆ. ಹೀಗಾಗಿ ಇಂತಹ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್ ಕುಮಾರ್ ಮಾಹಿತಿ ನೀಡಿದ್ರು.