alex Certify ವಾಹನಗಳ ಮೇಲೆ ಜಾತಿ ಬೋರ್ಡ್ ಹಾಕಿಕೊಂಡ್ರೆ ಬೀಳುತ್ತೆ ಫೈನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನಗಳ ಮೇಲೆ ಜಾತಿ ಬೋರ್ಡ್ ಹಾಕಿಕೊಂಡ್ರೆ ಬೀಳುತ್ತೆ ಫೈನ್​..!

ವಾಹನಗಳ ಮೇಲೆ ತಮ್ಮ ಜಾತಿಯ ಹೆಸರನ್ನ ಹಾಕಿಸಿಕೊಳ್ಳುವ ಅಭ್ಯಾಸವುಳ್ಳವರ ವಿರುದ್ಧ ಗುರುಗಾಂವ್​ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಗುರುಗಾಂವ್​ ಟ್ರಾಫಿಕ್​ ಪೊಲೀಸ್​ ಉಪ ಕಮೀಷನರ್​ ರಮೇಶ್​ ಕುಮಾರ್​​ ಈ ವಿಚಾರವಾಗಿ ಮಾತನಾಡಿ, ವಾಹನಗಳ ಮೇಲೆ ಜಾತಿಯನ್ನ ಹಾಕಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಟ್ರಾಫಿಕ್​ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪ್ರತಿ 20 ವಾಹನಗಳಲ್ಲಿ ಒಂದು ವಾಹನದ ಮೇಲಾದರೂ ಈ ರೀತಿಯ ಸ್ಟಿಕರ್​ಗಳು ಕಂಡು ಬರ್ತಿದೆ. ಹೀಗಾಗಿ ಇಂತಹ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್​ ಕುಮಾರ್​ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...