ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2014ರ ಇಂಗ್ಲೆಂಡ್ ಪ್ರವಾಸದ ಬಳಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 5 ಪಂದ್ಯದಲ್ಲಿ ವಿರಾಟ್ ಕ್ರಮವಾಗಿ 1, 8, 25, 0, 39, 28, 0,7, 6 ಹಾಗೂ 20 ರನ್ಗಳನ್ನಷ್ಟೇ ಬಾರಿಸೋದ್ರಲ್ಲಿ ಯಶಸ್ವಿಯಾಗಿದ್ರು.
ಇಂಗ್ಲೆಂಡ್ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಮೈದಾನಕ್ಕೆ ಇಳಿದಿದ್ದ ಕೊಹ್ಲಿಗೆ ಜೇಮ್ಸ್ ಆಂಡರ್ಸನ್ ಸಿಂಹ ಸ್ವಪ್ನವಾಗಿದ್ದರಂತೆ. ಇಂಗ್ಲೆಂಡ್ ಮಾಜಿ ಆಟಗಾರ ಮಾರ್ಕ್ ನಿಕೋಲಸ್ ಅವರ ನಾಟ್ ಜಸ್ಟ್ ಕ್ರಿಕೆಟ್ ಪಾಡ್ಕ್ಯಾಸ್ಟ್ನಲ್ಲಿ ಭಾಗಿಯಾಗಿ ಈ ಎಲ್ಲಾ ವಿಚಾರಗಳನ್ನ ಹಂಚಿಕೊಂಡ ಕೊಹ್ಲಿ ಈ ಕಠಿಣ ಪ್ರವಾಸದ ಬಳಿಕ ತಾನು ಖಿನ್ನತೆಯಿಂದ ಬಳಲಿದ್ದೆ ಎಂದು ಹೇಳಿಕೊಂಡಿದ್ದಾರೆ.
ವಾಟ್ಸಾಪ್ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ
ಅಲ್ಲದೇ ಆ ಸಮಯದಲ್ಲಿ ನಾನು ಒಂಟಿಯಾಗಿದ್ದೇನೆ ಎಂದೆನಿಸುತ್ತಿತ್ತು ಅಂತಾ ಹೇಳಿಕೊಂಡಿದ್ದಾರೆ.