ಒಂದು ಕಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನ ಹೊಂದಿದ್ದ ಅಟ್ಲಾಂಟಿಕ್ ಸಿಟಿಯಲ್ಲಿ 34 ಅಂತಸ್ತಿನ ಕ್ಯಾಸಿನೋವನ್ನ ಕೆಲವೇ ಸೆಕೆಂಡ್ಗಳಲ್ಲಿ ನೆಲಸಮ ಮಾಡಲಾಗಿದೆ. ಈ ದೃಶ್ಯವನ್ನ ನೋಡೋಕೆ ಜನರು 40 ಸಾವಿರ ರೂಪಾಯಿವರೆಗೆ ಪಾವತಿ ಮಾಡಿದ್ದಾರಂತೆ..!
ಕ್ಯಾಸಿನೋ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ಲಾಜಾ ಹೋಟೆಲ್ 2014ರಿಂದಲೇ ಬಂದ್ ಆಗಿತ್ತು. ಅಲ್ಲದೇ ಕಟ್ಟಡ ಕೂಡ ಶಿಥಿಲಾವಸ್ಥೆಗೆ ತಲುಪಿತ್ತು. ಇದು ದೊಡ್ಡ ಹಾಲಿವುಡ್ ಸೆಲೆಬ್ರಿಟಿಗಳ ಫೇವರಿಟ್ ತಾಣವಾಗಿತ್ತು.
ಬುಧವಾರ ಬೆಳಗ್ಗೆ 9:08ರ ಸುಮಾರಿಗೆ ಸ್ಫೋಟಕಗಳನ್ನ ಬಳಕೆ ಮಾಡಿ ಈ ಬೃಹತ್ ಕಟ್ಟಡವನ್ನ ಕೆಡವಲಾಗಿದೆ. ಕಟ್ಟಡ ನೆಲಸಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕುತೂಹಲಕಾರಿ ವಿಚಾರ ಅಂದರೆ ಕಟ್ಟಡ ನೆಲಸಮದ ವಿಚಾರವನ್ನ ಇಂಟರ್ನೆಟ್ನಲ್ಲಿ ಭಾರೀ ಪ್ರಚಾರ ಮಾಡಲಾಗಿತ್ತು. ಹಾಗೂ ಈ ದೃಶ್ಯವನ್ನ ಲೈವ್ ಆಗಿ ವೀಕ್ಷಿಸಲೂ ಅವಕಾಶವನ್ನ ನೀಡಲಾಗಿತ್ತು. ಇಷ್ಟು ಮಾತ್ರವಲ್ಲದೇ ಕಟ್ಟಡ ನೆಲಸಮದ ದೃಶ್ಯವನ್ನ ಕಣ್ಣಾರೆ ವೀಕ್ಷಿಸಲು ಕೆಲ ಟ್ರಂಪ್ ವಿರೋಧಿಗಳು ಮುಂಬದಿ ಆಸನಗಳನ್ನೇ ಕಾದಿರಿಸಿದ್ದರು ಎನ್ನಲಾಗಿದೆ.