ಜೈಲಿನಲ್ಲೇ ಅರ್ಧ ಜೀವನ ಕಳೆದರೂ ವೃದ್ಧಾಪ್ಯದಲ್ಲಿ ವಿಶೇಷ ಸಾಧನೆ….! 18-02-2021 4:51PM IST / No Comments / Posted In: Latest News, International ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ನಿಮ್ಮಲ್ಲಿದ್ರೆ ಯಾವ ಸವಾಲು ಕೂಡ ನಿಮಗೆ ದೊಡ್ಡದು ಎಂದೆನಿಸಲ್ಲ. ಅಮೆರಿಕದ 62 ವರ್ಷದ ಜೊಸೆಫ್ ವಾಲ್ಡೇಜ್ ಎಂಬಾತ ತೀರಾ ಇತ್ತೀಚೆಗೆ ಸಾಧನೆಯೊಂದನ್ನ ಮಾಡೋದ್ರ ಮೂಲಕ ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಡ್ರಗ್ ಸೇವನೆ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದ ವಾಲ್ಡೇಜ್ ತಮ್ಮ ಜೀವನದ ಬಹು ವರ್ಷಗಳನ್ನ ಜೈಲಿನಲ್ಲಿ ಕಳೆದಿದ್ದರು. ಆದರೆ ಇಂದು ಅವರು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ವಾಲ್ಡೇಜ್ರ ಈ ಜೀವನಗಾಥೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಾಗೂ ಸಾಕಷ್ಟು ನೆಟ್ಟಿಗರು ವಾಲ್ಡೇಜ್ರ ಸಾಧನೆಯನ್ನ ಕೊಂಡಾಡಿದ್ದಾರೆ. ತನ್ನನ್ನ ತಾನೇ ಗುರುತಿಸಲಾಗದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ..! ನನ್ನ ತಾಯಿ 14 ವರ್ಷದ ಹಿಂದೆ ನಿಧನರಾದ್ರು. ಆದರೆ ಆಕೆ ಎಂದಿಗೂ ನನ್ನ ಮೇಲಿನ ಭರವಸೆಯನ್ನ ಕಳೆದುಕೊಂಡಿರಲಿಲ್ಲ. ಆಕೆ ನನ್ನನ್ನ ಎಂದಿಗೂ ಬುದ್ಧಿವಂತೆ ಎಂದೇ ಕರೆಯುತ್ತಿದ್ದಳು ಎಂದು ಸಂದರ್ಶನವೊಂದರಲ್ಲಿ ವಾಲ್ಡೇಜ್ ಹೇಳಿಕೊಂಡಿದ್ದಾರೆ. This man accomplished something incredible AND took the coldest pic of 2021 pic.twitter.com/V4zLJF91iv — Spence (@_SupHolmes) February 15, 2021