ಪೆಟ್ರೋಲ್ ಬೆಲೆ ಈಗ ಮುಗಿಲು ಮುಟ್ಟಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗಾಗಲೇ 90 ರೂ. ಗಡಿ ದಾಟಿದ್ದು, ಶತಕದತ್ತ ಧಾವಿಸುತ್ತಿದೆ. ಇದರ ಮಧ್ಯೆ ತಮಿಳುನಾಡಿನ ಬಂಕ್ ಒಂದು ಉಚಿತ ಪೆಟ್ರೋಲ್ ನೀಡುವ ಆಫರ್ ನೀಡಿದ್ದು, ಇದು ಗ್ರಾಹಕರನ್ನು ಆಕರ್ಷಿಸುತ್ತಿದೆ.
ಕರೂರು ಜಿಲ್ಲೆಯ ನಾಗಂಪಲ್ಲಿ ಗ್ರಾಮದ ಅರವಕುರಚಿ ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್ ಇಂತದೊಂದು ಆಕರ್ಷಕ ಆಫರ್ ಇಟ್ಟಿದ್ದು, ಪೋಷಕರೊಂದಿಗೆ ವಾಹನದಲ್ಲಿ ಪೆಟ್ರೋಲ್ ಬಂಕ್ ಗೆ ಬರುವ ಮಕ್ಕಳು, ತಮಿಳಿನ ಪ್ರಸಿದ್ದ ಕವಿ ತಿರುವಳ್ಳುವರ್ ಬರೆದಿರುವ ʼತಿರುಕ್ಕುರಳ್ʼ ಕೃತಿಯಲ್ಲಿನ 20 ವಿಚಾರಗಳನ್ನು ಹೇಳಬೇಕಿದೆ. ಇದನ್ನು ಪೂರ್ಣಗೊಳಿಸಿದರೆ ಮಕ್ಕಳು ಬಂದಿದ್ದ ವಾಹನಕ್ಕೆ 1 ಲೀಟರ್ ಪೆಟ್ರೋಲ್ ಉಚಿತವಾಗಿ ಹಾಕಲಾಗುತ್ತದೆ.
ರೈಲು ಪ್ರಯಾಣಿಕರೇ ಗಮನಿಸಿ – ನಾಳೆ ದೇಶಾದ್ಯಂತ ರೈಲು ತಡೆ, ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
ತಿರುವಳ್ಳುವರ್ ದಿನದ ಅಂಗವಾಗಿ ಜನವರಿ 16 ರಿಂದ ಈ ಯೋಜನೆ ಆರಂಭವಾಗಿದ್ದು, ಈವರೆಗೆ 176 ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ತಿರುಕ್ಕುರಳ್ ಕೃತಿಯ 10 ವಿಚಾರಗಳನ್ನು ಹೇಳುವ ಮಕ್ಕಳ ಪೋಷಕರ ವಾಹನಕ್ಕೆ ಅರ್ಧ ಲೀಟರ್ ಉಚಿತ ಪೆಟ್ರೋಲ್ ಹಾಕಲಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಮುಳುಗಿದ್ದಾರೆ. ಇದೀಗ ಶಾಲೆಗಳು ಆರಂಭವಾಗುತ್ತಿದ್ದು, ಹೀಗಾಗಿ ಮಕ್ಕಳಲ್ಲಿ ತಿರುವಳ್ಳುವರ್ ಅವರ ಮಹತ್ತರ ವಿಚಾರಗಳನ್ನು ಅರಿವು ಮೂಡಿಸುವ ಸಲುವಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾಗಿ ಪೆಟ್ರೀಲ್ ಬಂಕ್ ಮಾಲೀಕರ ಹೇಳುತ್ತಾರೆ.