alex Certify ಒಲಂಪಿಕ್​ನಲ್ಲಿ ಭಾರತದ ಸ್ವರ್ಣ ಸಾಧನೆ: ‘ನೀರಜ್​’ ಹೆಸರಿಗೆ ಈಗ ಫುಲ್​ ಡಿಮ್ಯಾಂಡ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಂಪಿಕ್​ನಲ್ಲಿ ಭಾರತದ ಸ್ವರ್ಣ ಸಾಧನೆ: ‘ನೀರಜ್​’ ಹೆಸರಿಗೆ ಈಗ ಫುಲ್​ ಡಿಮ್ಯಾಂಡ್​..!

ಜುನಾಗರ್​​​ ನಲ್ಲಿ ರೋಪ್​ ವೇ ನಡೆಸುತ್ತಿರುವ ಉಷಾ ಬ್ರೇಕೋ ಕಂಪನಿಯು ತನ್ನ ಗ್ರಾಹಕರಿಗೆ ವಿಶಿಷ್ಟ ಆಫರ್​ ಒಂದನ್ನು ನೀಡಿದೆ. ನೀರಜ್​ ಎಂಬ ಹೆಸರನ್ನು ಹೊಂದಿರುವ ವ್ಯಕ್ತಿಯು ಇಲ್ಲಿ ರೋಪ್​ ವೇನಲ್ಲಿ ಉಚಿತವಾಗಿ ಹೋಗಬಹುದಾಗಿದೆ. ಒಲಿಂಪಿಕ್​​ನಲ್ಲಿ ಚಿನ್ನದ ಪದಕ ಸಂಪಾದಿಸಿದ ನೀರಜ್​ ಚೋಪ್ರಾಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಉಷಾ ಕಂಪನಿ ಈ ವಿಶೇಷ ಆಫರ್​ ನೀಡಿದೆ.

ಅಂದಹಾಗೆ ಈ ಆಫರ್​ ಆಗಸ್ಟ್​ 20ರವರೆಗೆ ಮಾತ್ರ ಇರಲಿದೆ. ಈ ಅವಧಿಯಲ್ಲಿ ಯಾವುದೇ ನೀರಜ್​​ ಇಲ್ಲಿ ಉಚಿತ ಪ್ರವಾಸ ಮಾಡಬಹುದು. ಇದು ಮಾತ್ರವಲ್ಲದೇ ಗುಜರಾತ್​​ನ ಭರೂಚ್​ನ ನೇತ್ರಾಂಗ್​​​ ಉಪನಗರದಲ್ಲಿರುವ ಪೆಟ್ರೋಲ್​ ಬಂಕ್​ ಒಂದು ನೀರಜ್​​ ಹೆಸರಿನ ಯಾವುದೇ ವ್ಯಕ್ತಿಗೆ 2 ದಿನಗಳ ಕಾಲ ಉಚಿತ ಪೆಟ್ರೋಲ್​ ವಿತರಿಸಿದೆ.

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ನೀರಜ್​ ಚೋಪ್ರಾ ಪುರುಷರ ಜಾವೆಲಿನ್​ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಸಂಪಾದಿಸಿದ್ದರು. ಸೋಮವಾರ ಟೋಕಿಯೋದಿಂದ ಭಾರತಕ್ಕೆ ಮರಳಿದ ನೀರಜ್​ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಟ್ರ್ಯಾಕ್​ & ಫೀಲ್ಡ್ ವಿಭಾಗದಲ್ಲಿ ಭಾರತವು ಇದೇ ಮೊದಲ ಬಾರಿಗೆ ಚಿನ್ನದ ಪದಕವನ್ನು ಸಂಪಾದಿಸಿದೆ. ಇದೇ ವಿಶೇಷವಾಗಿ ಉಷಾ ಬ್ರೆಂಕೋ ಕಂಪನಿಯು ಈ ವಿಶೇಷ ಆಫರ್​ ನೀಡಿದೆ. ಗಿರ್ನಾರ್​ ಪ್ರವಾಸಿ ತಾಣದಲ್ಲಿ ಈ ಕಂಪನಿಯು ರೋಪ್​ವೇ ಸೇವೆ ನೀಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...