ಬೆಂಗಳೂರು: ಆರ್ ಎಸ್ ಎಸ್ ನ್ನು ಜರ್ಮನಿಯ ಅಡಾಲ್ಫ್ ಹಿಟ್ಲರ್ ನ ನಾಜಿ ಪಡೆಗೆ ಹೋಲಿಸುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಹಣ ನೀಡದವರನ್ನು ಆರ್ ಎಸ್ ಎಸ್ ಪ್ರತ್ಯೇಕವಾಗಿ ಗುರುತಿಸುತ್ತಿದೆ. ದೇಣಿಗೆ ನಿಡದವರ ಮನೆಗಳಿಗೆ ಮಾರ್ಕ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದು ಆರ್ ಎಸ್ ಎಸ್ ನ ಕ್ರೂರ ವರ್ತನೆ ಎಂದು ಕಿಡಿಕಾರಿದ್ದಾರೆ.
ಮತ್ತೆ ಇಬ್ಬರು ಶಾಸಕರ ರಾಜೀನಾಮೆ – ಚುನಾವಣೆ ಹೊಸ್ತಿಲಲ್ಲೇ ಪತನದಂಚಿಗೆ ಬಂದು ನಿಂತ ಕಾಂಗ್ರೆಸ್ ಸರ್ಕಾರ
ಅಲ್ಲದೇ ಇದು ಜರ್ಮನಿಯಲ್ಲಿ ನಾಜಿ ಪಡೆಗಳು ಅನುಸರಿಸಿದ ನಡೆ. ಜರ್ಮನಿಯಲ್ಲಿ ನಾಜಿ ಸೇನೆ ರಚನೆಯಾದಾಗಲೇ ಆರ್ ಎಸ್ ಎಸ್ ಸಹ ಆರಂಭವಾಗಿದೆ. ಆರ್ ಎಸ್ ಎಸ್ ಕೂಡ ದೇಶದಲ್ಲಿ ಜನರ ಹಕ್ಕು ಕಸಿದುಕೊಳ್ಳುತ್ತಿದೆ. ಹೀಗೆ ಮುಂದುವರಿದರೆ ಇದು ದೇಶದ ಜನರನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿದೆ ಎಂಬುದು ತಿಳಿಯುತ್ತಿಲ್ಲ ಎಂದು ಗುಡುಗಿದ್ದಾರೆ.