ನಮ್ಮ ದೇಶದಲ್ಲಿ ಮಾಲ್ಡೀವ್ಸ್ ಪ್ರಿಯರಿಗೇನು ಬರಗಾಲವಿಲ್ಲ. ಮಾಲ್ಡೀವ್ಸ್ನಲ್ಲಿ ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿದ ಮೇಲೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
2020ರ ಅಂತ್ಯದಲ್ಲಿ ಭಾರತದ 62,905 ಮಂದಿ ಪ್ರವಾಸಿಗರು ಮಾಲ್ಡೀವ್ಸ್ಗೆ ತೆರಳಿದ್ದಾರೆ. ಅಲ್ಲದೇ ವಿಶ್ವದ ಎಲ್ಲಾ ಪ್ರವಾಸಿಗರಿಗಿಂತ ಮಾಲ್ಡೀವ್ಸ್ಗೆ ತೆರಳಿದ ಭಾರತೀಯರ ಸಂಖ್ಯೆ ಹೆಚ್ಚು.
2019ರಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿದವರ ಪೈಕಿ ಚೀನಾ ಮೊದಲ ಸ್ಥಾನದಲ್ಲಿತ್ತು. ಹಾಗೂ ಭಾರತ ಎರಡನೇ ಸ್ಥಾನವನ್ನ ಪಡೆದಿತ್ತು. ಈ ವರ್ಷದ ಆರಂಭದಲ್ಲಿ ಮಾಲ್ಡೀವ್ಸ್ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಜುಲೈ 15ರಿಂದ ಪ್ರವಾಸಿಗರಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ಅವಕಾಶ ನೀಡಿದ್ದೇ ತಡ ಭಾರತದಿಂದ ಹೆಚ್ಚುವರಿ ವಿಮಾನಗಳನ್ನ ಮಾಲ್ಡೀವ್ಸ್ಗೆ ಬಿಡಲಾಗಿದೆ.
ಈ ಬಾರಿ ಭಾರತದ ಬಳಿಕ ರಷ್ಯಾ 61,388 ಪ್ರವಾಸಿಗರೊಂದಿಗೆ 2ನೇ ಸ್ಥಾನವನ್ನ ಪಡೆದುಕೊಂಡಿದೆ. ಯುಕೆ 52,716 ಪ್ರವಾಸಿಗರೊಂದಿಗೆ ಮೂರನೇ ಸ್ಥಾನ ಪಡೆದಿದೆ.