ನಕಲಿ ಕಾರು ನೋಂದಾವಣಿ ಪ್ರಕರಣದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ದಿಲೀಪ್ ಛಾಬ್ರಿಯಾ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಕಾಮಿಡಿಯನ್ ಕಪಿಲ್ ಶರ್ಮಾರನ್ನ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಕಪಿಲ್ ಶರ್ಮಾ ತಮಗಾದ ವಂಚನೆ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ನಕಲಿ ಕಾರು ರಿಜಿಸ್ಟ್ರೇಷನ್ ಪ್ರಕರಣದಡಿಯಲ್ಲಿ ದಿಲೀಪ್ನನ್ನ ಪೊಲೀಸರು ಡಿಸೆಂಬರ್ 29ರಂದು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಜನವರಿ 7ರಂದು ಕಪಿಲ್ ಶರ್ಮಾರನ್ನ ವಿಚಾರಣೆಗೆ ಪೊಲೀಸರು ಕರೆದಿದ್ದರು. ಸಿಐಯು ಕಚೇರಿಗೆ ತೆರಳಿದ್ದ ಕಪಿಲ್ ಶರ್ಮಾಗೆ, ಸಚಿನ್ ವಾಝೆ ವಿಚಾರಣೆ ನಡೆಸಿದ್ದರು.
ನಾನು ದಿಲೀಪ್ ಚಾಬ್ರಿಯಾ ವಂಚನೆ ಬಗ್ಗೆ ದಿನ ಪತ್ರಿಕೆಗಳಲ್ಲಿ ಓದಿದ ಬಳಿಕ ಮುಂಬೈ ಪೊಲೀಸರನ್ನ ಭೇಟಿಯಾಗಲು ನಿರ್ಧರಿಸಿದೆ. ನಾವು ಚಾಬ್ರಿಯಾಗೆ ವ್ಯಾನಿಟಿ ವ್ಯಾನ್ ಸಿದ್ಧಪಡಿಸಿಕೊಡುವಂತೆ ಹೇಳಿದ್ದೆವು. ಮಾತ್ರವಲ್ಲದೇ ಸಂಪೂರ್ಣ ಹಣವನ್ನೂ ಪಾವತಿ ಮಾಡಿದ್ದೇವೆ. ಈ ಬಗ್ಗೆ ನಾವು ಸಂಬಂಧಪಟ್ಟ ಇಲಾಖೆಗೆ ಈ ಮೊದಲೇ ದೂರನ್ನ ನೀಡಿದ್ದೆವು. ಆದರೆ ಈಗ ಮೋಸಗಾರ ಚಾಬ್ರಿಯಾ ಬಂಧನಕ್ಕೊಳಗಾದ ಸುದ್ದಿ ಕೇಳಿ ಬಹಳ ಸಂತಸವಾಗಿದೆ. ಈ ಅಪರಾಧ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ ಎಂದು ಕಪಿಲ್ ಹೇಳಿದ್ದಾರೆ.