ಥೈವಾನ್ನ ಸಂಗೀತ ಪ್ರಿಯ ಟ್ಯಾಕ್ಸಿ ಡ್ರೈವರ್ ಒಬ್ಬ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಒಂದನ್ನ ನೀಡಿದ್ದಾನೆ. ಈತನ ಜೊತೆ ಪ್ರಯಾಣ ಮಾಡುವ ಗ್ರಾಹಕರಿಗೆ ಕರೋಕೆ ಹೇಳಲು ಬರುವವರಾಗಿದ್ರೆ ಅಂತವರಿಗೆ ಈತನ ಟ್ಯಾಕ್ಸಿಯಲ್ಲಿ ಫ್ರೀ ಡ್ರೈವಿಂಗ್ ಅವಕಾಶ ಸಿಗಲಿದೆ. ಈ ಟ್ಯಾಕ್ಸಿ ಡ್ರೈವರ್ ತನ್ನ ವಾಹನದ ಒಳಗೆಯೇ ಕರೋಕೆಗೆ ಬೇಕಾದ ಎಲ್ಲಾ ಸಂಗೀತ ಸಾಧನಗಳನ್ನ ಅಳವಡಿಸಿದ್ದಾನೆ.
ಈ ಟ್ಯಾಕ್ಸಿ ಡ್ರೈವರ್ನನ್ನು ತು ಚಿಂಗ್ ಲಿಯಾಂಗ್ ಎಂದು ಗುರುತಿಸಲಾಗಿದೆ. ತನ್ನ ಜೊತೆ ಕಾರು ಪ್ರಯಾಣ ಮಾಡುವ ವೇಳೆ ಕರೋಕೆ ಪ್ರದರ್ಶನದಲ್ಲಿ ಭಾಗಿಯಾದರೆ ಅವರಿಗೆ ಉಚಿತ ಸವಾರಿ ಸೌಲಭ್ಯವನ್ನ ನೀಡುತ್ತಾರೆ. ಹಾಗಂತ ಈ ಸೌಲಭ್ಯ ನೀಡಲು ಹೋಗಿ ಲಿಯಾಂಗ್ ತಮ್ಮ ಉದ್ಯಮದಲ್ಲಿ ನಷ್ಟ ಅನುಭವಿಸುತ್ತಾರೆ ಎಂದು ನೀವೆಂದುಕೊಂಡಿದ್ದರೆ ನಿಮ್ಮ ಊಹೆ ನಿಜಕ್ಕೂ ತಪ್ಪು.
ತಮ್ಮ ಹರ್ಷಚಿತ್ತದ ವರ್ತನೆ ಮೂಲಕವೇ ಲಿಯಾಂಗ್ ತಮ್ಮ ಗ್ರಾಹಕರಿಗೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನ ಹೊರತರೋಕೆ ಪ್ರೇರಣೆ ನೀಡ್ತಾರೆ. ಕೆಲ ಗ್ರಾಹಕರಂತೂ ಖುಷಿಯಿಂದ ನಿಗದಿತ ದರಕ್ಕಿಂತ ದುಪ್ಪಟ್ಟು ಹಣವನ್ನ ಟಿಪ್ಸ್ ರೂಪದಲ್ಲಿ ನೀಡುತ್ತಾರೆ. 57 ವರ್ಷದ ಈ ಚಾಲಕ 27 ವರ್ಷಗಳಿಂದ ಟ್ಯಾಕ್ದಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾರೆ. ಕಳೆದ 8 ವರ್ಷಗಳಿಂದ ಕರೋಕೆ ಪ್ರಿಯರಿಗೆ ಈ ಆಫರ್ ನೀಡ್ತಿದ್ದಾರೆ.