ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೃಷ್ಣ ಅವರು ಬಿಡುಗಡೆ ಮಾಡಿರುವ 2021ರ ಕ್ಯಾಲೆಂಡರ್ ಸಾಕಷ್ಟು ವಿಭಿನ್ನ, ವಿಶೇಷತೆಗಳನ್ನು ಹೊಂದಿದ್ದು, ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ.
ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿಕಲಚೇತನರ ಕಿರು ಪರಿಚಯದೊಂದಿಗೆ 2021ರ ವಿಶೇಷ ಕ್ಯಾಲೆಂಡರ್ ರೂಪಿಸಲಾಗಿದ್ದು, ತಿಂಗಳುಗಳು ಕಳೆದಂತೆ ಕ್ಯಾಲೆಂಡರ್ ತಿರುವುತ್ತಿದ್ದಂತೆ ಒಬ್ಬೊಬ್ಬರ ಸಾಧನೆ ಪ್ರತಿನಿತ್ಯದ ಬದುಕಿಗೆ ಸ್ಫೂರ್ತಿಯನ್ನು ನೀಡಲಿದೆ.
ಪ್ಯಾರಾ ಒಲಂಪಿಯನ್ ಶರತ್ ಗಾಯಕ್ವಾಡ್, ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಅಡ್ವಂಚರ್ ಟೂರಿಸ್ಟ್ ಮಂಜುನಾಥ್ ಚಿಕ್ಕಯ್ಯ, ಕ್ರಿಕೆಟರ್ ಅಶ್ವಿನಿ ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್, ಈಜುಪಟು ಜಯಂತ್, ಫಿಟ್ನೆಸ್ ಶ್ರೀನಿವಾಸ್ ಗೌಡ ಸೇರಿದಂತೆ ಹಲವರ ಸಾಧನೆ ಈ ಕ್ಯಾಲೆಂಡರ್ ನಲ್ಲಿ ಅನಾವರಣಗೊಂಡಿದೆ.