ಭಾರತೀಯ ಸಂಗೀತ ಸಾಧನಗಳಲ್ಲಿ ಮೂಡಿಬಂತು ಜಿಂಗಲ್ ಬೆಲ್ಸ್… ಜಿಂಗಲ್ ಬೆಲ್ಸ್… 25-12-2020 3:52PM IST / No Comments / Posted In: Latest News, India ಕ್ರಿಸ್ಮಸ್ ವಿಶೇಷವಾದ ಜಿಂಗಲ್ ಬೆಲ್ಸ್ ಜಿಂಗಲ್ ಬೆಲ್ಸ್ ಹಾಡು ಅಂದ್ರೆ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಹಾಡು ಚಿರಪರಿಚಿತ. ಆದರೆ ಈ ಹಾಡನ್ನ ಭಾರತೀಯ ಸಂಗೀತ ಸಾಧನಗಳನ್ನ ಬಳಸಿ ನುಡಿಸಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ..? ಮಹೀಂದ್ರಾ & ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಇಂತಹದ್ದೊಂದು ವಿಡಿಯೋವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ರಿಸ್ಮಸ್ ಗಿಡದ ಕೆಳಗೆ ಕೂತ ಪುರುಷರ ತಂಡ ಸಿತಾರ್, ಸಾರಂಗಿ, ಶಹನಾಯು ಹಾಗೂ ಡೋಲನ್ನ ಬಳಕೆ ಮಾಡಿ ಜಿಂಗಲ್ ಬೆಲ್ಸ್ ಸಂಗೀತವನ್ನ ನುಡಿಸಿದ್ದಾರೆ. ಸಂಗೀತ ಸಾಧನವನ್ನ ನುಡಿಸುತ್ತಿರುವ ಪುರುಷರೆಲ್ಲ ಸಾಂತಾ ಟೊಪ್ಪಿಯನ್ನ ಹಾಕಿರೋದನ್ನ ನೋಡಬಹುದಾಗಿದೆ. ಎಲ್ಲಾ ಸಂಗೀತ ಸಾಧನಗಳಲ್ಲೂ ಜಿಂಗಲ್ಬೆಲ್ಸ್ ಅತ್ಯಂತ ಸುಂದರವಾಗಿ ಕೇಳಿದೆ. ಡೋಲ್ ಅಂತೂ ನೆಟ್ಟಿಗರ ಮನ ಗೆಲ್ಲುವಲ್ಲಿ ಮುಂಚೂಣಿ ಸ್ಥಾನ ಪಡೆದಿದೆ. https://youtu.be/63ttuq8S1N4 A bit contrived but still ends up making some good vibes… A good warmup for Christmas Eve…. pic.twitter.com/7vlCSzQGbR — anand mahindra (@anandmahindra) December 24, 2020