ಕೋವಿಡ್ನಿಂದಾಗಿ ವಿಶ್ವಾದ್ಯಂತ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ. ಮಾರಣಾಂತಿಕ ವೈರಸ್ನಿಂದಾಗಿ ಅನೇಕರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಉತ್ತರ ಟೆಕ್ಸಾಸ್ನ ಗ್ರ್ಯಾಂಡ್ ಪ್ರೈರಿಯಲ್ಲಿ ಕೊರೊನಾ ವೈರಸ್ಗೆ ದಂಪತಿ ಜೀವ ತೆತ್ತಿದ್ದಾರೆ.
ಪಾಲ್ ಬ್ಲ್ಯಾಕ್ವೆಲ್ ಹಾಗೂ ರೋಸ್ ಮೇರಿ ಬ್ಲ್ಯಾಕ್ವೆಲ್ ಸ್ಥಳೀಯ ಶಾಲೆಯೊಂದರ ಶಿಕ್ಷಕರಾಗಿದ್ದರು. ಕೊರೊನಾ ವೈರಸ್ಗೆ ತುತ್ತಾಗಿದ್ದ ಈ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಫೋರ್ಟ್ ವರ್ತ್ನ ಹ್ಯಾರಿಸ್ ಮೆಥೋಡಿಸ್ಟ್ ಆಸ್ಪತ್ರೆಯಲ್ಲಿ ದಂಪತಿ ಒಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರನ್ನ ವೆಂಟಿಲೇಟರ್ನಲ್ಲಿ ಇಡಲಾಗಿತ್ತಾದರೂ ಇಬ್ಬರೂ ಬದುಕುಳಿಯಲಿಲ್ಲ.
ತಂದೆ – ತಾಯಿ ನಿಧನದ ಬಗ್ಗೆ ಮಾತನಾಡಿದ ಪುತ್ರ ಕಿಸ್ಟೋಫರ್ ಬ್ಲಾಕ್ವೆಲ್, ನನಗೆ ಈ ಅನುಭವ ಇದೇ ಮೊದಲು. ನನಗೆ ಇದನ್ನ ಪದಗಳಲ್ಲಿ ವ್ಯಕ್ತಪಡಿಸಲಾಗುತ್ತಿಲ್ಲ ಎಂದಿದ್ದಾನೆ.