ಲಾಟರಿ ಹಾಗೂ ಅದೃಷ್ಟ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಮಾತಿಗೆ ಸಾಕ್ಷಿ ಎಂಬಂತೆ ವರ್ಜಿನೀಯಾದ ವ್ಯಕ್ತಿಯೊಬ್ಬ ಖರೀದಿ ಮಾಡಿದ್ದ 160 ಲಾಟರಿಗಳಲ್ಲಿ ನೂರಾ ಅರವತ್ತೂ ಲಾಟರಿಗಳು ಕ್ಯಾಶ್ ಪ್ರೈಸ್ ಗೆದ್ದು ಕೊಟ್ಟ ವಿಚಿತ್ರ ಘಟನೆ ನಡೆದಿದೆ.
ಕ್ವಾಮೆ ಕ್ರಾಸ್ ಡಮ್ಫ್ರೈಸ್ 160 ಟಿಕೆಟ್ಗಳನ್ನ ಖರೀದಿ ಮಾಡಿದ್ದರು. ಈ ಎಲ್ಲಾ ಟಿಕೆಟ್ಗಳು 7314 ಸಂಖ್ಯೆಯ ವಿವಿಧ ಕಾಂಬಿನೇಷನ್ಗಳನ್ನ ಹೊಂದಿದ್ದವು. ಈ ಎಲ್ಲ ಟಿಕೆಟ್ಗಳು ಇದೀಗ ಕ್ವಾಮೆಗೆ ಅದೃಷ್ಟವನ್ನ ತಂದುಕೊಟ್ಟಿವೆ.
ನಾನು ಟಿವಿ ಕಾರ್ಯಕ್ರಮದಲ್ಲಿ ಈ ಬಗ್ಗೆ ನೋಡಿದೆ. ಯಾವುದೋ ಕಾರಣಗಳಿಂದ ಈ ಟಿಕೆಟ್ ಗಳು ನನ್ನಲ್ಲೇ ಉಳಿದಿದ್ದವು ಅಂತಾ ಲಾಟರಿ ಅಧಿಕಾರಿಗಳಿಗೆ ಕ್ವಾಮೆ ಹೇಳಿದ್ದಾರೆ. ಪ್ರತಿ ಟಿಕೆಟ್ಗಳ ಮೊತ್ತವನ್ನ ಒಟ್ಟುಗೂಡಿಸಿ ಒಟ್ಟು 5.89 ಕೋಟಿ ರೂಪಾಯಿಗಳು ಕ್ವಾಮೆ ಪಾಲಾಗಿವೆ.
ನಾನು ಫಾಸ್ಟ್ ಫುಡ್ ರೆಸ್ಟಾರೆಂಟ್ನ ಎದುರು ಆಹಾರಕ್ಕಾಗಿ ಕ್ಯೂನಲ್ಲಿ ನಿಂತಿದ್ದಾಗ ನಾನು ಲಾಟರಿ ಗೆದ್ದ ವಿಚಾರ ತಿಳಿಯಿತು. ನನಗೆ ಮೊದಲು ಇದನ್ನ ನಂಬೋಕೆ ಸಾಧ್ಯವಾಗಲಿಲ್ಲ. ನಾನು ಬರೋಬ್ಬರಿ 82 ಬಾರಿ ಲಾಟರಿಗಳನ್ನ ಮರುಪರಿಶೀಲಿಸಿದ್ದೇನೆ ಎಂದು ಹೇಳಿದ್ರು.