ಏಕದಿನ ಪಂದ್ಯದಲ್ಲಿ 12 ಸಾವಿರ ರನ್ಗಳನ್ನ ಪೂರೈಸಿದ ವಿರಾಟ್ ಕೊಹ್ಲಿಯನ್ನ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹಾಡಿ ಹೊಗಳಿದ್ದಾರೆ.
2008ರಲ್ಲಿ ಕ್ರಿಕೆಟ್ ಲೋಕಕ್ಕೆ ಪಾದರ್ಪಣೆ ಮಾಡುವಾಗ ಕೊಹ್ಲಿ ಬಳಿ ಇದ್ದ ಎನರ್ಜಿಯೇ ಈಗಿನ ತನಕ ಇದೆ ಅಂತಾ ಲಕ್ಷ್ಮಣ್ ಹೇಳಿದ್ದಾರೆ.
ಏಕದಿನ ಪಂದ್ಯದಲ್ಲಿ ವೇಗವಾಗಿ 12 ಸಾವಿರ ರನ್ ಗಳಿಸಿದ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಹೊಸ ಮೈಲಿಗಲನ್ನ ತಲುಪಿದ್ರು.
ಪ್ರತಿಯೊಂದು ಸರಣಿಯಲ್ಲೂ ಅವರು ಆಡಿದ ರೀತಿ, ಕಾಪಾಡಿಕೊಂಡ ಕ್ಷಮತೆ ಕೊಹ್ಲಿಗೆ ಈ ಸಾಧನೆ ಮಾಡಲು ಸಾಧ್ಯವಾಗುವಂತೆ ಮಾಡಿದೆ. ನನಗೆ ಹಲವು ಬಾರಿ ಕೊಹ್ಲಿಗೆ ಈ ಸಾಧನೆ ಮಾಡೋದು ಕಷ್ಟ ಎಂದು ಎನಿಸಿದ್ದು ಇದೆ. ಆದರೆ ಕ್ರಿಕೆಟ್ ಮೈದಾನದಲ್ಲಿ ಕೊಹ್ಲಿಯ ಬ್ಯಾಟಿಂಗ್ ವೈಖರಿ, ಎನರ್ಜಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.