ಬಹಳ ವರ್ಷಗಳಿಂದ ಚಾಲ್ತಿಯಲ್ಲಿರುವ ಮ್ಯಾನ್ ಹೋಲ್ ಶುದ್ಧಿ ಕಾರ್ಯಕ್ಕೆ ಕಾರ್ಮಿಕರನ್ನ ಬಳಕೆ ಮಾಡೋದನ್ನ ಸಂಪೂರ್ಣವಾಗಿ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನ ಜಾರಿಗೆ ತರಲು ಹೊರಟಿದೆ.
ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಈ ಹಿಂದೆಯೇ ಇದ್ದ ಪಿಇಎಂಎಸ್ಆರ್ ಆಕ್ಟ್ನಲ್ಲಿ ಕೆಲ ತಿದ್ದುಪಡಿ ತಂದಿದ್ದು ವಿಶ್ವ ಶೌಚಾಲಯ ದಿನವಾದ ಗುರುವಾರದಂದು ಘೋಷಣೆ ಮಾಡಿದೆ.
ಸಫಾಯಿ ಮಿತ್ರ ಸುರಕ್ಷಾ ಸವಾಲಿನಡಿಯಲ್ಲಿ ಕೇಂದ್ರ ಸರ್ಕಾರ ಪೌರ ಕಾರ್ಮಿಕರಿಗೆ ಮ್ಯಾನ್ಹೋಲ್ ಕ್ಲೀನ್ ಮಾಡುವ ಮಷಿನ್ಗಳ ಖರೀದಿಗೆ ಅನುದಾನ ನೀಡಲಿದೆ.
ಕಾರ್ಮಿಕರು ಮ್ಯಾನ್ಹೋಲ್ಗಳಿಗೆ ಇಳಿಯೋದನ್ನ ತಪ್ಪಿಸುವ ಸಲುವಾಗಿ ಮಷಿನ್ಗಳ ಖರೀದಿಗೆ ಹಣ ನೀಡಲಿದ್ದೇವೆ. ಸಂಬಂಧ ಪೌರಾಡಳಿತಗಳು ಕಾರ್ಮಿಕರಿಗೆ ಯಂತ್ರ ಖರೀದಿ ಮಾಡಿಕೊಡಬೇಕು ಅಂತಾ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪೂರಿ ಹೇಳಿದ್ದಾರೆ.