ಇಂಡೋನೇಷಿಯಾದ ವ್ಯಕ್ತಿಯೊಬ್ಬನ ಮನೆ ಛಾವಣಿ ಮೇಲೆ ಉಲ್ಕೆ ಅಪ್ಪಳಿಸಿದ ಪರಿಣಾಮ ರಾತ್ರೋ ರಾತ್ರಿ ಆತ ಮಿಲೇನಿಯರ್ ಆಗಿದ್ದಾನೆ.
ಶವಪೆಟ್ಟಿಗೆ ತಯಾರಕನಾಗಿದ್ದ 33 ವರ್ಷದ ಜೋಸುವಾ ಹುಟಗಲುಂಗ್ಗೆ ಸಿಕ್ಕಿದ ಉಲ್ಕಾ ಶಿಲೆ 1 ಮಿಲಿಯನ್ಗೆ ಮಾರಾಟವಾಗಿದೆ.
ಆಗಸ್ಟ್ ತಿಂಗಳಲ್ಲಿ ಹುಟಗಲುಂಗ್ ತಮ್ಮ ಮನೆಯ ಮುಂದೆ ಕೆಲಸ ಮಾಡುತ್ತಿದ್ದ ವೇಳೆ 2.1 ಕೆಜಿ ತೂಕದ ಉಲ್ಕಾ ಶಿಲೆ ಅವರ ಮನೆಯ ಚಾವಣಿ ಮೇಲೆ ಬಿದ್ದಿತ್ತು.
ಶಿಲೆ ಬಿದ್ದ ರಭಸಕ್ಕೆ ಹುಟಗಲುಂಗ್ ಮನೆ ಛಾವಣಿ ಮುರಿದಿದ್ದು, ಮಾತ್ರವಲ್ಲದೇ ಭೂಕಂಪದ ಅನುಭವವಾದಂತೆ ಭಾಸವಾಗಿತ್ತು. ಬಳಿಕ ಉಲ್ಕಾ ಶಿಲೆಯನ್ನ ಗಮನಿಸಿದ್ದಾರೆ. ಈ ಉಲ್ಕಾ ಶಿಲೆ ಪ್ರತಿ ಗ್ರಾಂಗೆ 63 ಸಾವಿರ ರೂಪಾಯಿ ಬೆಲೆ ಹೊಂದಿದೆ ಎಂದು ಅಂದಾಜಿಸಲಾಗಿದೆ.