ಯುಕೆಯಲ್ಲಿ ಆಪಲ್ ಉತ್ಪನ್ನಗಳನ್ನ ಸಾಗಿಸುತ್ತಿದ್ದ ಟ್ರಕ್ ಡ್ರೈವರ್ ಮೇಲೆ ದಾಳಿ ನಡೆಸಿದ ದರೋಡೆಕೋರರು 6.63 ಮಿಲಿಯನ್ ಡಾಲರ್ ಮೌಲ್ಯದ ಆಪಲ್ ಉತ್ಪನ್ನಗಳನ್ನ ಕಳವು ಮಾಡಿದ್ದಾರೆ .
ಎಂ 1 ಮೋಟಾರ್ ವೇನ ಸೌತ್ ಬಾಂಡ್ ಸ್ಲಿಪ್ ರೋಡ್ ಜಂಕ್ಷನ್ನಲ್ಲಿ 18 ನವೆಂಬರ್ನಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಟ್ರಕ್ ಚಾಲಕ ಹಾಗೂ ಭದ್ರತಾ ಸಿಬ್ಬಂದಿಯನ್ನ ಕಟ್ಟಿ ಹಾಕಿದ ದರೋಡೆಕೋರರು ಟ್ರಕ್ನ್ನ ತಾವೇ ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ಎಲ್ಲಾ ಉತ್ಪನ್ನಗಳನ್ನ ಬೇರೆ ಟ್ರಕ್ಗೆ ಸಾಗಿಸುವ ಮೂಲಕ ಪರಾರಿಯಾಗಿದ್ದಾರೆ.
ಲುಟ್ಟರ್ ವರ್ತ್ನಲ್ಲಿ ಟ್ರಕ್ ಪತ್ತೆಯಾಗಿದೆ. ಮೂಲಗಳ ಪ್ರಕಾರ ದರೋಡೆಕೋರರು ಆಪಲ್ ಕಂಪನಿಗೆ ಸೇರಿದ 48 ಉತ್ಪನ್ನಗಳನ್ನ ಕಳುವು ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೇ ಯಾರಾದರೂ ಕಡಿಮೆ ಬೆಲೆಗೆ ಆಪಲ್ ಉತ್ಪನ್ನಗಳನ್ನ ಮಾರುತ್ತಿರೋದು ಕಂಡು ಬಂದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.