alex Certify ನಡುರಸ್ತೆಯಲ್ಲೇ ದುಬಾರಿ ಮೌಲ್ಯದ ಆಪಲ್ ಉತ್ಪನ್ನಗಳ ಕಳವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ದುಬಾರಿ ಮೌಲ್ಯದ ಆಪಲ್ ಉತ್ಪನ್ನಗಳ ಕಳವು

ಯುಕೆಯಲ್ಲಿ ಆಪಲ್​ ಉತ್ಪನ್ನಗಳನ್ನ ಸಾಗಿಸುತ್ತಿದ್ದ ಟ್ರಕ್​ ಡ್ರೈವರ್​ ಮೇಲೆ ದಾಳಿ ನಡೆಸಿದ ದರೋಡೆಕೋರರು 6.63 ಮಿಲಿಯನ್​ ಡಾಲರ್​ ಮೌಲ್ಯದ ಆಪಲ್​ ಉತ್ಪನ್ನಗಳನ್ನ ಕಳವು ಮಾಡಿದ್ದಾರೆ .

ಎಂ 1 ಮೋಟಾರ್​​ ವೇನ ಸೌತ್​ ಬಾಂಡ್​​ ಸ್ಲಿಪ್​ ರೋಡ್​ ಜಂಕ್ಷನ್​​ನಲ್ಲಿ 18 ನವೆಂಬರ್​​ನಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಟ್ರಕ್​ ಚಾಲಕ ಹಾಗೂ ಭದ್ರತಾ ಸಿಬ್ಬಂದಿಯನ್ನ ಕಟ್ಟಿ ಹಾಕಿದ ದರೋಡೆಕೋರರು ಟ್ರಕ್​ನ್ನ ತಾವೇ ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ಎಲ್ಲಾ ಉತ್ಪನ್ನಗಳನ್ನ ಬೇರೆ ಟ್ರಕ್​​ಗೆ ಸಾಗಿಸುವ ಮೂಲಕ ಪರಾರಿಯಾಗಿದ್ದಾರೆ.

ಲುಟ್ಟರ್​ ವರ್ತ್​ನಲ್ಲಿ ಟ್ರಕ್​​ ಪತ್ತೆಯಾಗಿದೆ. ಮೂಲಗಳ ಪ್ರಕಾರ ದರೋಡೆಕೋರರು ಆಪಲ್​ ಕಂಪನಿಗೆ ಸೇರಿದ 48 ಉತ್ಪನ್ನಗಳನ್ನ ಕಳುವು ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೇ ಯಾರಾದರೂ ಕಡಿಮೆ ಬೆಲೆಗೆ ಆಪಲ್​ ಉತ್ಪನ್ನಗಳನ್ನ ಮಾರುತ್ತಿರೋದು ಕಂಡು ಬಂದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...