ಭಾರತೀಯ ಮೂಲದ ಮಹಿಳೆ ಪ್ರಮೀಳಾ ಜಯಪಾಲ್ ಸತತ ಮೂರನೇ ಬಾರಿಗೆ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ,
ಮೂಲತಃ ಚೆನ್ನೈನವರಾದ ಡೆಮಾಕ್ರಟಿಕ್ ಪಕ್ಷದ ಪ್ರಮಿಳಾ ಜಯಪಾಲ್ ರಿಪಬ್ಲಿಕನ್ ಪಕ್ಷದ ಕ್ರೇಗ್ ಕೆಲ್ಲರ್ನ್ನ ಶೇಕಡಾ 70 ಅಂಕಗಳಿಂದ ಸೋಲಿಸುವ ಮೂಲಕ ಮರು ಆಯ್ಕೆಗೊಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಪ್ರಗತಿಪರ ನಾಯಕರ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪ್ರಮೀಳಾ 3,44,241 ಮತಗಳನ್ನ ಪಡೆದ್ರೆ, ಕೆಲರ್ ಕೇವಲ 61,940 ಮತಗಳನ್ನ ಪಡೆಯಲಷ್ಟೇ ಶಕ್ತರಾದರು.
ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವು ಹಾಗೂ ಸಿಎಎಯನ್ನ ಟೀಕಿಸಿರುವ ಪ್ರಮಿಳಾ ಜಯಪಾಲ್, 2016ರಲ್ಲಿ ಮೊದಲ ಬಾರಿಗೆ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದರು. ಈ ಮೂಲಕ ಅಮೆರಿಕ ಪ್ರತಿನಿಧಿ ಸಭಾಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.