ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸ್ತುತ 150ಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, ಬಹುತೇಕ ಕ್ಲಿನಿಕಲ್ ಪ್ರಯೋಗದ ಕೊನೆ ಹಂತದಲ್ಲಿವೆ.
ಈ ವೇಳೆ ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತೆರೆಮರೆಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ತಮ್ಮ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಿಶ್ವದಾದ್ಯಂತದ ವಿಜ್ಞಾನಿಗಳು ಮತ್ತು ಸಂಶೋಧಕರು ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ದಿನದ 24 ತಾಸು ಕೆಲಸ ಮಾಡುತ್ತಿದ್ದಾರೆ.
ಅವರ ಒತ್ತಡದ ಕೆಲಸದ ನಡುವೆಯೂ ಕೋವಿಡ್ -19 ಲಸಿಕೆಗಳ ಬಗ್ಗೆ ತಮ್ಮ ಕೆಲಸವನ್ನು ದಾಖಲಿಸುತ್ತಿದ್ದಾರೆ. ಈ ಮೂಲಕ ಲಸಿಕೆ ಬಗ್ಗೆ ಮತ್ತು ಸಾಂಕ್ರಾಮಿಕದ ಬಗ್ಗೆ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ಆಕ್ಸಫರ್ಡ್, ದಕ್ಷಿಣ ಆಫ್ರಿಕಾ, ಹಾರ್ವರ್ಡ್ ಸೇರಿ ವಿವಿಧ ಕಡೆ ಸಂಶೋಧನೆಯಲ್ಲಿ ತೊಡಗಿಕೊಂಡವರ ವಿಡಿಯೋವನ್ನು ಟೀಮ್ ಹಾಲ್ಸ್ ತಂಡ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ.