ರಾಜ್ಯಪಾಲರ ಮೂಲಕ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಶಿವಸೇನೆ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ರನ್ನ ಆಯ್ಕೆ ಮಾಡಿದೆ.
ಈ ವಿಚಾರವಾಗಿ ಮಾತನಾಡಿದ ಶಿವಸೇನಾ ಮುಖ್ಯ ವಕ್ತಾರ ಸಂಜಯ್ ರಾವತ್, ಸಿಎಂ ಉದ್ದವ್ ಠಾಕ್ರೆ ಊರ್ಮಿಳಾ ಮಾತೋಂಡ್ಕರ್ ಜೊತೆ ಮಾತನಾಡಿದ್ದು ನಾಮ ನಿರ್ದೇಶನ ಮಾಡಲು ಒಪ್ಪಿಗೆ ನೀಡಲಾಗಿದೆ ಅಂತಾ ಅಧಿಕೃತ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ಮೇಲ್ಮನೆಗೆ ನಾಮನಿರ್ದೇಶನ ಮಾಡಲು ಶಿವಸೇನಾ ಸರ್ಕಾರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ 12 ಹೆಸರುಗಳನ್ನ ಶಿಫಾರಸು ಮಾಡಬೇಕಿದೆ. ಇದೀಗ ರಾಜ್ಯಪಾಲರಿಗೆ ಊರ್ಮಿಳಾ ಹೆಸರನ್ನ ರಾಜ್ಯಪಾಲರಿಗೆ ಶಿಫಾರಸು ಮಾಡುವುದರ ಜೊತೆಗೆ ಶಿವಸೇನೆ ಈ ಹೆಸರಾಂತ ನಟಿಯನ್ನ ತಮ್ಮ ಪಕ್ಷದ ವಕ್ತಾರನ್ನಾಗಿ ಮಾಡಿಕೊಳ್ಳಲು ಚಿಂತನೆ ನಡೆಸಿದೆ.
ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಹೆಸರು ಕಾಂಗ್ರೆಸ್ನಿಂದ ಕೇಳಿ ಬಂದಿತ್ತು. ಆದರೆ ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಶಿವಸೇನೆ ಊರ್ಮಿಳಾ ಕಳೆದ ವರ್ಷವೇ ಕಾಂಗ್ರೆಸ್ನಿಂದ ಹೊರಬಂದಿದ್ದಾರೆ ಅಂತಾ ಹೇಳಿದೆ. 2019ರಲ್ಲಿ ಊರ್ಮಿಳಾ ಕಾಂಗ್ರೆಸ್ನಿಂದ ಮುಂಬೈ ಉತ್ತರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದರು. ಆದರೆ ಅವರು ಬಿಜೆಪಿಯ ಗೋಪಾಲ್ ಶೆಟ್ಟಿ ಎದುರು ಪರಾಭವಗೊಂಡಿದ್ದರು.