ಚೆನ್ನೈ: ಲಾಕ್ಡೌನ್ ಸಮಯದಲ್ಲಿ 3.54 ಲಕ್ಷ ವಲಸೆ ಕಾರ್ಮಿಕರನ್ನು ತವರಿಗೆ ಮುಟ್ಟಿಸಲು ತಮಿಳುನಾಡು ಸರ್ಕಾರ 265 ಶ್ರಮಿಕ್ ಎಕ್ಸ್ಪ್ರೆಸ್ ರೈಲಿಗೆ 34.6 ಕೋಟಿ ರೂಪಾಯಿ ವೆಚ್ಚ ಪಾವತಿ ಮಾಡಿದೆ ಎಂದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯೊಂದು ಹೇಳಿದೆ.
ಆರ್. ಪಾಂಡ್ಯರಾಜ್ ಎಂಬುವವರು ದಕ್ಷಿಣ ರೈಲ್ವೆಯಿಂದ ಪಡೆದ ಮಾಹಿತಿಯಂತೆ, ಶ್ರಮಿಕ್ ಎಕ್ಸ್ಪ್ರೆಸ್ ರೈಲಿನ ಓಡಾಟಕ್ಕೆ ಕೇಂದ್ರ ಸರ್ಕಾರ ಯಾವುದೇ ಹಣ ನೀಡಿಲ್ಲ ಎಂವ ಅಂಶವನ್ನು ಬಹಿರಂಗ ಮಾಡಿದೆ. ಸ್ಲೀಪರ್ ಕ್ಲಾಸ್ ವಿಶೇಷ ರೈಲುಗಳಲ್ಲಿ ರಾಜ್ಯ ಸರ್ಕಾರ ಗುರುತಿಸಿದ ವಲಸೆ ಕಾರ್ಮಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿತ್ತು.
ದಕ್ಷಿಣ ರೈಲ್ವೆ ಮೇ ಹಾಗೂ ಆಗಸ್ಟ್ ತಿಂಗಳ ನಡುವೆ 507 ರೈಲುಗಳನ್ನು ಓಡಿಸಿದ್ದು, ಒಟ್ಟು 7.35 ಲಕ್ಷ ವಲಸೆ ಕಾರ್ಮಿಕರನ್ನು ರವಾನಿಸಲಾಗಿದೆ. ಅದರಲ್ಲಿ ತಮಿಳುನಾಡು ಸರ್ಕಾರವೇ ಶೇ.50 ರಷ್ಟು ರೈಲುಗಳ ಹಣ ನೀಡಿದೆ. ದಕ್ಷಿಣ ರೈಲ್ವೆ ಇಲಾಖೆ ಟಿಕೆಟ್ ನಿಂದ 66.28 ಕೋಟಿ ಸಂಗ್ರಹಿಸಿದೆ. ಅದರಲ್ಲಿ ತಮಿಳುನಾಡು ಸರ್ಕಾರವೇ ಏಕಾಂಗಿಯಾಗಿ 34.6 ಕೋಟಿ ರೂ. ನೀಡಿದೆ.