ತನ್ನ ಕೆಟ್ಟ ಗಾಯನದ ಶೈಲಿ ಮೂಲಕವೇ ಚಿರಪರಿಚಿತರಾದವರು ಡಿಂಚಕ್ ಪೂಜಾ. ಸದ್ಯ ಯಾವುದೇ ಸಾಂಗ್ ಗಳನ್ನ ರಿಲೀಸ್ ಮಾಡದೇ ಸುಮ್ಮನಿದ್ದ ಪೂಜಾ ಇದೀಗ ಮತ್ತೆ ತಮ್ಮ ಖರಾಬ್ ಕಂಠಸಿರಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶನ ಮಾಡಿದ್ದಾರೆ.
2020ರಲ್ಲಿ ತನ್ನ ಜೀವನಶೈಲಿ ಹೇಗಾಗಿದೆ ಎಂಬ ಥೀಮ್ ಇಟ್ಕೊಂಡು ಸಂಗೀತ ನಿರ್ದೇಶಿಸಿದ್ದಾರೆ ಡಿಂಚಕ್, ಹಲ್ಲುಜ್ಜೋದ್ರಿಂದ ಹಿಡಿದು ಮಲಗೋವರೆಗಿನ ಕತೆಯನ್ನ ಹಾಡಿನ ಮೂಲಕ ತೋರಿಸಿದ್ದಾರೆ ಪೂಜಾ.
ರೋಜ್ ರೋಜ್ ಕಾ ಕಾಮ್. ಇದುಡಿಂಚಕ್ ಪೂಜಾರ ಹೊಸ ಸಾಂಗ್, ಯೂ ಟ್ಯೂಬ್ನಲ್ಲಿ ಅಕ್ಟೋಬರ್ 9ರಂದು ರಿಲೀಸ್ ಆಗಿರೋ ಈ ಸಾಂಗ್ಗೆ ನೆಟ್ಟಿಗರು ಕಮೆಂಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಈ ಸಾಂಗ್ನ ಕೇಳಿದ ಅನೇಕರು ಕಿವಿಯಲ್ಲಿ ರಕ್ತ ಬರ್ತಿದೆ ಅಂತಾ ಹೇಳಿದ್ರೆ ಇನ್ನು ಕೆಲವರು 2020ರ ಕೊನೆಯ ದುರಂತವನ್ನೂ ನೋಡಿಬಿಟ್ವಿ ಅಂತಾ ಬರೆದುಕೊಂಡಿದ್ದಾರೆ. ಈ ರೀತಿಯ ಉಲ್ಟಾ ಸೀದಾ ಕಮೆಂಟ್ಗಳು ಬರ್ತಿದ್ದಂತೆ ಡಿಂಚಕ್ ಪೂಜಾ ಕಮೆಂಟ್ ಸೆಕ್ಷನ್ನ್ನೇ ಆಫ್ ಮಾಡಿ ಹಾಕಿದ್ದಾರೆ.