alex Certify ‌ʼಕಚ್ಚಾ ಬದಾಮ್ʼ ಖ್ಯಾತಿಯ ಭುವನ್​ರಿಂದ ಮತ್ತೊಂದು ಹಾಡು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕಚ್ಚಾ ಬದಾಮ್ʼ ಖ್ಯಾತಿಯ ಭುವನ್​ರಿಂದ ಮತ್ತೊಂದು ಹಾಡು: ವಿಡಿಯೋ ವೈರಲ್

ಕೋಲ್ಕತಾ: ಸೋಷಿಯಲ್ ಮೀಡಿಯಾಗೆ ಯಾವುದೋ ಮೂಲೆಯಲ್ಲಿ ಇರುವ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ಇಲ್ಲವೇ ಯಾವುದೋ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸುವ ಶಕ್ತಿ ಇದೆ. ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದ್ದ ಬದಾಮ್​ ಬದಾಮ್​ ಕಚ್ಚಾ ಬದಾಮ್​ ಹಾಡು ಇದಕ್ಕೊಂದು ಉದಾಹರಣೆ. ಪಶ್ಚಿಮ ಬಂಗಾಳದ ಬಿರ್ಭೂಮ್‌ನ ಭುವನ್ ಬಡ್ಯಾಕರ್ ಹಾಡಿದ್ದ ಈ ಹಾಡು ಇಡೀ ವಿಶ್ವಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು. ಈ ಹಾಡಿಗೆ ಕುಣಿದವರೇ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಇದು ವೈರಲ್​ ಆಗಿತ್ತು.

ದೇಶ-ವಿದೇಶಗಳ ಸೆಲೆಬ್ರಿಟಿಗಳು ಕೂಡ ರೀಲ್ ವಿಡಿಯೋಗಳನ್ನು ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ. ಬದ್ಯಾಕರ್ ಅವರು ಕಡಲೆಕಾಯಿ (ಕಚ್ಚಾ ಬದಾಮ್) ಮಾರಾಟಕ್ಕಾಗಿ ಬಿರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುತ್ತಿದ್ದಾಗ ಖರೀದಿದಾರರನ್ನು ಆಕರ್ಷಿಸಲು ಹಾಡನ್ನು ಸಂಯೋಜಿಸಿದ್ದರು. ಒಂದು ದಿನ, ಅವರು ಕಡಲೆಕಾಯಿಯನ್ನು ಮಾರುತ್ತಿದ್ದಾಗ, ಈ ಹಾಡನ್ನು ಗೊಣಗುತ್ತಿದ್ದರು. ಯಾರೋ ಒಬ್ಬರು ಹಾಡನ್ನು ಒಮ್ಮೆ ಕೇಳಿದ ನಂತರ ಅದನ್ನು ರೆಕಾರ್ಡ್​ ಮಾಡಿ ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲಿಂದ ಇದೊಂದು ರೀತಿಯಲ್ಲಿ ಹುಚ್ಚೆಬ್ಬಿಸಿಬಿಟ್ಟಿತ್ತು.

ಅದೇ ಗುಂಗಿನಲ್ಲಿರುವ ಭುವನ್ ಅವರು ಇನ್ನೊಂದು ಗೀತೆ ರಚಿಸಿದ್ದರು. ಆದರೆ ಅದ್ಯಾಕೋ ಅಷ್ಟು ಹಿಟ್​ ಆಗಲಿಲ್ಲ. ಇದೀಗ ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾಗಿರುವ ಕಾಳಿ ಪೂಜೆಯ ಸಂದರ್ಭದಲ್ಲಿ ಅವರು ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಅವರು ಇನ್ನು ಮುಂದೆ ಕಡಲೆಕಾಯಿ ಮಾರಾಟ ಮಾಡುವುದಿಲ್ಲ ಎಂದು ಅರ್ಥ ಬರುವ ಹಾಡು ಹಾಡಿದ್ದಾರೆ.

ಅವರ ಹೊಸ ಹಾಡು ‘ಏಖಾನ್ ಆಮಿ ಬೆಚ್ಚಿ ನಾ ಬದಮ್’. ಈ ಹಾಡಿನಲ್ಲಿ, ಅವರು ತಮ್ಮ ಜೀವನ ಹೇಗೆ ಬದಲಾಗಿದೆ ಎಂಬುದನ್ನು ಹೇಳಿದ್ದಾರೆ. ಈ ಹಾಡು ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಈಗ ನೋಡಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...