ಕಡಲೆಹಿಟ್ಟಿನ ಪೇಸ್ಟ್ ಅನ್ನು ಮುಖಕ್ಕ ಹಚ್ಚಿಕೊಳ್ಳುವುದು ಅತ್ಯುತ್ತಮ ಫೇಸ್ ಪ್ಯಾಕ್ ಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿರಬಹುದು.
ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಕುಳಿತು ಮುಖದ ಸೌಂದರ್ಯ ಹೆಚ್ಚಿಸುವ ಈ ಸಾಮಾಗ್ರಿಯನ್ನು ನೀವು ವಾರಕ್ಕೊಮ್ಮೆ ಹೀಗೆ ಬಳಸಿ ನೋಡಿ.
ಬಿಸಿಲಿಗೆ ಹೋಗಿ ಬಂದು ನಿಮ್ಮ ಮುಖ ಕಪ್ಪಾಗಿದ್ದರೆ ಹೀಗೆ ಮಾಡಿ. ಬಿಸಿ ಹಾಲಿನಲ್ಲಿ ಆರು ದಳ ಕೇಸರಿ ನೆನೆಸಿಡಿ. ಅರ್ಧ ಗಂಟೆ ಬಳಿಕ ಅದನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ. ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ.
ಇದು ನಿಮ್ಮ ಮುಖಕ್ಕೆ ಹೊಳಪು ನೀಡುವುದು ಮಾತ್ರವಲ್ಲ, ಮುಖದ ಮೇಲಿರುವ ಅನಗತ್ಯ ಕೂದಲನ್ನು ತೆಗೆದು ಹಾಕುತ್ತದೆ. ಇದೇ ಮಿಶ್ರಣಕ್ಕೆ ಲಿಂಬೆ ರಸ ಮತ್ತು ಅರಶಿನ ಬೆರೆಸಿ ಹಚ್ಚುವುದರಿಂದ ನಿಮ್ಮ ತ್ವಚೆ ಹೊಳಪು ಪಡೆಯುತ್ತದೆ. ಸತ್ತ ಜೀವಕೋಶಗಳು ದೂರವಾಗುತ್ತವೆ.
ಮೊಡವೆಗಳಿಂದ ಉಂಟಾದ ಕಪ್ಪು ಕಲೆಗಳನ್ನೂ ಹೋಗಲಾಡಿಸುವ ಈ ಪ್ಯಾಕ್ ಅನ್ನು ಒಣ ತ್ವಚೆಯವರು, ಎಣ್ಣೆ ತ್ವಚೆಯವರೂ ಯಾವುದೇ ಭಯವಿಲ್ಲದೆ ಬಳಸಬಹುದು. ಇದರಿಂದ ತ್ವಚೆಯೂ ಮೃದುತ್ವ ಪಡೆದುಕೊಳ್ಳುತ್ತದೆ.