ಯುಕೆ ಸರ್ಕಾರ ಕೊರೊನಾ ವೈರಸ್ ಪ್ರತಿಕಾಯ ಪರೀಕ್ಷೆ ಕಿಟ್ ನ್ನು ಲಕ್ಷಾಂತರ ಮಂದಿಗೆ ಉಚಿತವಾಗಿ ವಿತರಿಸಲು ಯೋಚಿಸುತ್ತಿದೆ ಎಂದು ಡೇಲಿ ಟೆಲಿಗ್ರಾಂ ಸಮಾಚಾರ್ ವರದಿ ಮಾಡಿದೆ. ಜೂನ್ನಲ್ಲಿ ನಡೆಸಿದ ರಹಸ್ಯ ಮಾನವ ಪ್ರಯೋಗಗಳಲ್ಲಿ ಒಬ್ಬ ವ್ಯಕ್ತಿಯು ಕೊರೊನೊ ವೈರಸ್ಗೆ ತುತ್ತಾಗಿದ್ದಾನಾ ಎಂಬುದನ್ನು ಈ ಕಿಟ್ ಮೂಲಕ ಪತ್ತೆ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ ಹೇಳಬಲ್ಲ ಫಿಂಗರ್ಪ್ರಿಂಟ್ ಪರೀಕ್ಷೆಗಳು ಶೇಕಡಾ 98.6ರಷ್ಟು ಯಶಸ್ವಿಯಾಗಿವೆ.
ಈ ಪರೀಕ್ಷೆಯನ್ನು ಯುಕೆ ರಾಪಿಡ್ ಟೆಸ್ಟ್ ಕನ್ಸೋರ್ಟಿಯಂ ಅಭಿವೃದ್ಧಿಪಡಿಸಿದೆ. ಇದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಮುಖ ಯುಕೆ ರೋಗನಿಯಂತ್ರಣ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ನಡೆದಿದೆ.
ವರ್ಷಾಂತ್ಯದ ಮೊದಲು, ಸಾಮೂಹಿಕ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಬಳಸಲು ಎಬಿಸಿ -19 ಲ್ಯಾಟರಲ್ ಫ್ಲೋ ಟೆಸ್ಟ್ ಲಭ್ಯವಾಗಲಿದೆ ಎಂದು ಸಚಿವರು ಭರವಸೆ ಹೊಂದಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಲಕ್ಷಾಂತರ ಕಿಟ್ ತಯಾರಿಸಲು ಯೋಜನೆ ರೂಪಿಸಲಾಗಿದೆ. ಪರೀಕ್ಷೆಯನ್ನು ಉಚಿತವಾಗಿಡಲು ಮತ್ತು ಸೂಪರ್ಮಾರ್ಕೆಟ್ ಬದಲು ಆನ್ಲೈನ್ನಲ್ಲಿ ಮಾರಾಟ ಮಾಡಲು ಸೂಚನೆ ನೀಡುವ ಸಾಧ್ಯತೆಯಿದೆ.