ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ ಮಂದಿಗೆ, ನೇರವಾಗಿ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ.
ಯುಕೆದ ರೆಂಟಲ್ ಗಾರ್ಡನ್ ಒಂದರಲ್ಲಿ ಆರು ಅಡಿ ಉದ್ದದ ರೆಡ್ ಟೇಲ್ಡ್ ಬೋ ಎನ್ನುವ ಹೆಬ್ಬಾವು ಕಾಣಿಸಿಕೊಂಡಿದೆ. ಗಾರ್ಡನ್‌ನಲ್ಲಿ ವಾಕಿಂಗ್‌ಗೆಂದು ಬಂದ ಅನೇಕರು ಈ ಹಾವನ್ನು ನೋಡಿ ಅವಾಕ್ಕಾಗಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆರಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸ್ಥಳೀಯ ಪೊಲೀಸ್ ಠಾಣೆಗೆ ರವಾನಿಸಲಾಗಿದೆ.
ಈ ಬಗ್ಗೆ ಪೊಲೀಸರು ಮಾತನಾಡಿದ್ದು, ಈ ರೀತಿವನ್ನು ಕೆಲವರು ಸಾಕುತ್ತಿದ್ದಾರೆ. ಸಾಕುವವರು ಹಾವನ್ನು ಬೇಜವಾಬ್ದಾರಿಯುತವಾಗಿ ಬಿಡಬಾರದು. ಕೂಡಲೇ ಮೈಕ್ರೋ ಚಿಪ್‌ಗಳನ್ನು ಅಳವಡಿಸಬೇಕು ಎಂದಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.