![](https://kannadadunia.com/wp-content/uploads/2020/06/WhatsApp-Image-2019-09-16-at-10.11.36-PM-1280x700-1.jpeg)
ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ ಇದರ ರುಚಿ ಹೆಚ್ಚುತ್ತದೆ. ಇಲ್ಲಿದೆ ನೋಡಿ ಸುಲಭವಾಗಿ ರುಚಿಕರವಾಗಿ ಮಾಡಬಹುದಾದ ಮೊಮೊಸ್ ಚಟ್ನಿ.
ಬೇಕಾಗುವ ಸಾಮಗ್ರಿಗಳು:
ಬೆಳ್ಳುಳ್ಲಿ ಎಸಳು-12, ಒಣಮೆಣಸು-5, ವಿನೇಗರ್-2 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1/2 ಟೀ ಸ್ಪೂನ್.
ಮಾಡುವ ವಿಧಾನ:
ಒಣಮೆಣಸನ್ನು ಹದ ಬಿಸಿನೀರಿನಲ್ಲಿ 1 ಗಂಟೆಗಳ ಕಾಲ ನೆನೆಸಿಡಿ. ನಂತರ ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಂತರ ಇದಕ್ಕೆ ನೆನೆಸಿಟ್ಟ ಒಣಮೆಣಸು, ಸಕ್ಕರೆ, ವಿನೇಗರ್ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೊಮೊಸ್ ಜತೆಗೆ ಸವಿಯಿರಿ.