ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಮಕ್ಕಳಿಗಂತೂ ಕೇಕ್ ಎಂದರೆ ಪಂಚಪ್ರಾಣ. ಸುಲಭವಾಗಿ ಮಾಡುವ ಪೈನಾಪಲ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಮಗ್ರಿಗಳು:
2 ಟೇಬಲ್ ಸ್ಪೂನ್-ಬೆಣ್ಣೆ, 1 ಟೇಬಲ್ ಸ್ಪೂನ್-ಬ್ರೌನ್ ಶುಗರ್, ಪೈನಾಪಲ್ ಸ್ಲೈಸ್-1 (ವೃತ್ತಾಕಾರವಾಗಿ ಕತ್ತರಿಸಿಕೊಂಡಿದ್ದು), ಚೆರ್ರಿ-1, 3 ಟೇಬಲ್ ಸ್ಪೂನ್-ಸಕ್ಕರೆ, 1-ಮೊಟ್ಟೆ ಬಿಳಿಭಾಗ, 1/8 ಟೀ ಸ್ಪೂನ್-ವೆನಿಲ್ಲಾ ಎಸೆನ್ಸ್, 3 ಟೇಬಲ್ ಸ್ಪೂನ್-ಮೈದಾ, 1/8 ಟೀ ಸ್ಪೂನ್- ಬೇಕಿಂಗ್ ಪೌಡರ್, 1/8 ಟೀ ಸ್ಪೂನ್-ಉಪ್ಪು, 1 ಟೇಬಲ್ ಸ್ಪೂನ್-ಹಾಲು.
ಮಾಡುವ ವಿಧಾನ:
ಒಂದು ಬೌಲ್ ಗೆ 1 ಟೇಬಲ್ ಸ್ಪೂನ್ ಕರಗಿಸಿಕೊಂಡ ಬೆಣ್ಣೆ ಹಾಗೂ ಬ್ರೌನ್ ಶುಗರ್ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕೇಕ್ ಮಾಡುವ ಒಂದು ಬೌಲ್ ಗೆ ಹಾಕಿಕೊಳ್ಳಿ.
ನಂತರ ಅದರ ಮೇಲೆ ಪೈನಾಪಲ್ ಸ್ಲೈಸ್ ಇಡಿ. ಪೈನಾಪಲ್ ಮಧ್ಯಭಾಗದಲ್ಲಿ ಒಂದು ತೂತು ರೀತಿ ಮಾಡಿಕೊಂಡು ಚೆರ್ರಿ ಇಡಿ. ಇನ್ನೊಂದು ಬೌಲ್ ನಲ್ಲಿ ಸಕ್ಕರೆ, 1 ಟೇಬಲ್ ಸ್ಪೂನ್ ಬೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ವೆನಿಲ್ಲಾ ಎಸೆನ್ಸ್, ಮೊಟ್ಟೆಯ ಬಿಳಿಭಾಗ ಹಾಕಿ ಮಿಕ್ಸ್ ಮಾಡಿ ನಂತರ ಮೈದಾ, ಬೇಕಿಂಗ್ ಪೌಡರ್, ಉಪ್ಪು ಹಾಕಿ ತಿರುಗಿಸಿ. ಸ್ವಲ್ಪ ಹಾಲು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಂಡು ಈ ಮಿಶ್ರಣವನ್ನು ಪೈನಾಪಲ್ ಮೇಲೆ ಹಾಕಿ. ಪ್ರೀ ಹೀಟ್ ಮಾಡಿಕೊಂಡ ಒವೆನ್ ನಲ್ಲಿ 25 ನಿಮಿಷಗಳ ಕಾಲ ಬೇಯಿಸಿ ಸರ್ವ್ ಮಾಡಿ.