alex Certify ಸುಲಭವಾಗಿ ಮಾಡಿ ರೆಡ್ ವೆಲ್ವೆಟ್ ಕೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ರೆಡ್ ವೆಲ್ವೆಟ್ ಕೇಕ್

ಮಕ್ಕಳು ಮನೆಯಲ್ಲಿದ್ದರೆ ಕೇಕ್, ಸ್ವೀಟ್ಸ್ ಎಂದೆಲ್ಲಾ ಕೇಳುತ್ತಿರುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಆಗುವಂತಹ ರೆಡ್ ವೆಲ್ವೆಟ್ ಕೇಕ್ ಇದೆ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು-4 ಟೇಬಲ್ ಸ್ಪೂನ್, ಸಕ್ಕರೆ-2.5 ಟೇಬಲ್ ಸ್ಪೂನ್, ಬೇಕಿಂಗ್ ಪೌಡರ್-1/4 ಟೀ ಸ್ಪೂನ್, ಉಪ್ಪು-ಚಿಟಿಕೆ, ಕೋಕೊ ಪೌಡರ್-1 ಟೀ ಸ್ಪೂನ್, ಕೆಂಪು ಫುಡ್ ಕಲರ್-2 ಹನಿ, ವೆನಿಲ್ಲಾ ಎಸೆನ್ಸ್-1/4 ಟೀ ಸ್ಪೂನ್, ವಿನೇಗರ್-1/2 ಟೀ ಸ್ಪೂನ್, ಹಾಲು-3 ಟೇಬಲ್ ಸ್ಪೂನ್, ಎಣ್ಣೆ-1.5 ಟೇಬಲ್ ಸ್ಪೂನ್.

ಮಾಡುವ ವಿಧಾನ:

ಒಂದು ಬೌಲ್ ಗೆ ಮೈದಾ, ಸಕ್ಕರೆ, ಕೋಕೋ ಪೌಡರ್, ಉಪ್ಪು, ಫುಡ್ ಕಲರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಹಾಲು, ಎಣ್ಣೆ, ವಿನೇಗರ್, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಒಂದು ಕಾಫಿ ಮಗ್ ಗೆ ಕೂಡ ಹಾಕಬಹುದು ಇಲ್ಲದಿದ್ದರೆ ಚಿಕ್ಕ ಬೌಲ್ ಗೆ ಹಾಕಿ ಅದನ್ನು ಮೈಕ್ರೋ ಒವೆನ್ ನಲ್ಲಿಟ್ಟು ಹೈ ಪವರ್ ನಲ್ಲಿ 1 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರವಾದ ರೆಡ್ ವೆಲ್ವೆಟ್ ಕೇಕ್ ರೆಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...