ಜಿಯೋ ಮಾರ್ಟ್ ಈಗಾಗಲೇ ಶುರುವಾಗಿದೆ. ಇದು ಅನೇಕ ಅಂಗಡಿ ಮಾಲೀಕರಿಗೆ ನೆರವಾಗ್ತಿದೆ. ಜಿಯೋ ಮಾರ್ಟ್ ನಲ್ಲಿ ಕಿರಾಣಿ ಅಂಗಡಿ ಮಾಲೀಕರು ವಸ್ತುಗಳ ಮಾರಾಟ ಮಾಡಬಹುದು. ಜಿಯೋ ಮಾರ್ಟ್ ಗೆ ಅನೇಕ ಕಿರಾಣಿ ಅಂಗಡಿಗಳು ಸೇರ್ಪಡೆಯಾಗ್ತಿವೆ.
ಕಂಪನಿಯ ನಿಗದಿತ ಮಾನದಂಡಗಳನ್ನು ಪೂರೈಸಿದರೆ ನೀವು ಜಿಯೋಮಾರ್ಟ್ನಲ್ಲಿ ವಿತರಕರಾಗಲು ಸಹ ಸಾಧ್ಯ. ವಿತರಕರಾಗಲು ಕೆಲವು ಅರ್ಹತೆ ಹೊಂದಿರಬೇಕು.
ವಿತರಕರಾಗಬಯಸುವವರು ಈಗಾಗಲೇ ವಿತರಣಾ ವ್ಯವಹಾರದಲ್ಲಿರಬೇಕು. ಜಿಯೋ ಜೊತೆ ವ್ಯವಹಾರ ಮಾಡಲು ಸಾಕಷ್ಟು ಮೂಲಸೌಕರ್ಯ ಇರಬೇಕು.
ಅವರು ಚಿಲ್ಲರೆ ವ್ಯಾಪಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಇಷ್ಟು ಅರ್ಹತೆ ಹೊಂದಿದ್ದರೆ ಜಿಯೋ ಮಾರ್ಟ್ ವಿತರಕರಾಗಲು ಅರ್ಜಿ ಸಲ್ಲಿಸಬಹುದು. https://partnercentral.jioconnect.com/web/guest/distributor ಗೆ ಹೋಗಿ ಅಲ್ಲಿ I am interested ಬಟನ್ ಕ್ಲಿಕ್ ಮಾಡಬೇಕು.ಅಲ್ಲಿ ತೆರೆದುಕೊಳ್ಳುವ ಫಾರ್ಮ್ ತುಂಬಬೇಕು. ಅರ್ಹತೆಯ ಆಧಾರದ ಮೇಲೆ ವಿತರಕರನ್ನು ನೀಡಲಾಗುತ್ತದೆ.