ಕಳೆದ ಹೋಗಿದ್ದ ಮದುವೆ ಉಂಗುರವೊಂದು 3 ವರ್ಷದ ನಂತರ ಅದರ ಮಾಲೀಕರಿಗೆ ಸಿಕ್ಕಿದೆ. ಅದಕ್ಕೆ ಕಾರಣವಾಗಿದ್ದು ಕರೋನಾ ಲಾಕ್ ಡೌನ್…!
ಲಾಕ್ ಡೌನ್ ನಿಂದಾಗಿ ಮುಚ್ಚಿದ್ದ ಫ್ಲೋರಿಡಾದ ಕೊಕೊನಟ್ ಎಂಬ ಹೋಟೆಲ್ ನ ಟೇಬಲ್ ಗಳನ್ನು ನವೀಕರಿಸಲು ಮಾಲೀಕರು ಮುಂದಾಗಿದ್ದಾರೆ. ಈ ವೇಳೆ ಟೇಬಲ್ ನ ಮೂಲೆಯಲ್ಲಿದ್ದ ಹೊಳೆಯುವ ವಸ್ತು ಅವರ ಗಮನ ಸೆಳೆದಿದೆ.
ಒಂದು ಬಂಗಾರದ ನಾಣ್ಯ ಒಂದಿಷ್ಟು ಮಣ್ಣಿನೊಂದಿಗೆ ಒಂದು ಉಂಗುರ ಕಂಡಿದೆ. ಉಂಗುರದ ಮೇಲೆ ಮೈಕ್ ಮತ್ತು ಲೀಸಾ 8-21-15 ಎಂದು ಕೆತ್ತಿದ್ದನ್ನೂ ಗಮನಿಸಿದ ಹೋಟೆಲ್ ಮ್ಯಾನೇಜರ್ ಹೋಟೆಲ್ ಫೇಸ್ಬುಕ್ ಪೇಜ್ ನಲ್ಲಿ ಉಂಗುರದ ಫೋಟೋವನ್ನ ಶೇರ್ ಮಾಡಿದ್ದಾರೆ.
5 ಸಾವಿರ ಬಾರಿ ಶೇರ್ ಆಗಿದ್ದ ಫೋಟೋ ಕಡೆಗೂ ನ್ಯೂ ಯಾರ್ಕ್ ನಲ್ಲಿರುವ ಲೀಸಾಗೂ ತಲುಪಿದೆ. ಆಕೆ ಹೋಟೆಲ್ ಗೆ ಫೋನ್ ಮಾಡಿ ಅದು ತನ್ನ ಮದುವೆಯ ಉಂಗುರವಾಗಿದ್ದು, 3 ವರ್ಷದ ಹಿಂದೆ ಕಳೆದು ಹೋಗಿತ್ತು ಎಂದು ತಿಳಿಸಿದ್ದಾಳೆ.
ಹೋಟೆಲ್ ನ ಸಿಬ್ಬಂದಿ ನ್ಯೂಯಾರ್ಕ್ ಗೆ ಉಂಗುರವನ್ನು ಕಳಿಸಿ ಕೊಟ್ಟಿದ್ದಾರೆ. ಮದುವೆಯ ಉಂಗುರವನ್ನು ಸರಿಯಾದ ವಾರಸುದಾರರಿಗೆ ತಲುಪಿಸಲು ಮಾಡಿದ ಹೋಟೆಲ್ ಸಿಬ್ಬಂದಿ ಪ್ರಯತ್ನ ಪ್ರಶಂಸೆಗೆ ಪಾತ್ರವಾಗಿದೆ.
https://www.facebook.com/coconutsbenice/posts/10158383462098069