ಯಾರೂ ಸ್ವೀಕರಿಸಲಾಗದಂತಹ ಹಾಳಾದ ಕರೆನ್ಸಿ ನೋಟ್ ಇದ್ಯಾ? ಇದೆ, ಆದ್ರೆ ಅದನ್ನು ಕೊಟ್ಟು ಕೈತೊಳ್ಕೊಳಕಾಗ್ತಿಲ್ಲ ಅನ್ನೋ ಯೋಚನೆಯಲ್ಲಿದ್ದೀರಾ? ಅದಕ್ಕೆ ಇಲ್ಲಿದೆ ನೋಡಿ ಪರಿಹಾರ.
ನೀವು ಈಗ ಅವುಗಳನ್ನು ಸುಲಭವಾಗಿ, ಉಚಿತವಾಗಿ ವಿನಿಮಯ ಮಾಡಿಕೊಳ್ಳಬಹುದು. ಮ್ಯುಟಿಲೇಟೆಡ್ ನೋಟುಗಳನ್ನು ಬ್ಯಾಂಕಿನಲ್ಲಿ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು.
ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ
ಇದರ ಜೊತೆ ಇನ್ನೊಂದು ಗಮನದಲ್ಲಿರಿಸಿಕೊಳ್ಳಬೇಕಾದ ಅಂಶ ಎಂದ್ರೆ, ನೋಟುಗಳ ವಿನಿಮಯ ಮಾಡಿಕೊಳ್ಳಲು ನೀವು ಆ ಬ್ಯಾಂಕಿನ ಗ್ರಾಹಕರಾಗಬೇಕಾಗಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಬಿಐ (ನೋಟ್ ಮರುಪಾವತಿ) ನಿಯಮಗಳ ಪ್ರಕಾರ, ಎಲ್ಲಾ ಬ್ಯಾಂಕ್ ಶಾಖೆಗಳು ಸಾಮಾನ್ಯ ಜನರ ಮಾಹಿತಿಗಾಗಿ ನೋಟುಗಳು ಮತ್ತು ನಾಣ್ಯಗಳ ವಿನಿಮಯ ಸೌಲಭ್ಯದ ಲಭ್ಯತೆಯನ್ನು ಸೂಚಿಸುವ ಪ್ರದರ್ಶನ ಫಲಕವನ್ನು ಹೊಂದಿರಬೇಕು ಎಂದಿದೆ.
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ತೆರಿಗೆಗಳು, ಯುಟಿಲಿಟಿ ಬಿಲ್ಗಳು ಮುಂತಾದ ಸರ್ಕಾರದ ಬಾಕಿಗಳನ್ನು ಪಾವತಿಸುವಾಗ ಈ ನೋಟುಗಳನ್ನು ಬ್ಯಾಂಕ್ ಕೌಂಟರ್ಗಳಲ್ಲಿ ಸ್ವೀಕರಿಸಬೇಕು. ವಿನಿಮಯದ ಸಮಯದಲ್ಲಿ ನೀವು ಸಾಮಾನ್ಯವಾಗಿ ಪೂರ್ಣ ಮೊತ್ತವನ್ನು ಪಡೆಯುತ್ತೀರಿ ಎಂಬುದನ್ನು ಗಮನಿಸಿ.