ಇದು ಮಹಿಳೆಯರು ಓದಲೇಬೇಕಾದ ಸುದ್ದಿ. ಕೂದಲಿಗೆ ಪರ್ಮನೆಂಟ್ ಹೇರ್ ಡೈ, ಕೆಮಿಕಲ್ ಹೇರ್ ಸ್ಟ್ರೇಟ್ ನರ್ ಗಳನ್ನು ನೀವು ಬಳಸ್ತಾ ಇದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಸಂಶೋಧನೆಯೊಂದರಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.
ಈ ಕೆಮಿಕಲ್ ಹೇರ್ ಪ್ರಾಡಕ್ಟ್ ಗಳಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು ಅಂತಾ ಸಂಶೋಧಕರು ದೃಢಪಡಿಸಿದ್ದಾರೆ. ಕ್ಯಾನ್ಸರ್ ಮತ್ತು ಹೇರ್ ಡೈಗೆ ಯಾವ ರೀತಿ ಕನೆಕ್ಷನ್ ಇದೆ ಅನ್ನೋ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆಫ್ರಿಕಾ ಹಾಗೂ ಅಮೆರಿಕದ ಮಹಿಳೆಯರು ಹೇರ್ ಡೈ ಅನ್ನು ಅತಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.
ಹಾಗಾಗಿ ಅವರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳೋ ಸಾಧ್ಯತೆಗಳು ಅಧಿಕ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಪರ್ಮನೆಂಟ್ ಹೇರ್ ಡೈ ಬಳಸುತ್ತಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಉಳಿದವರಿಗಿಂತ ಶೇ.9ರಷ್ಟು ಹೆಚ್ಚಾಗಿರುವುದು ಸಂಶೋಧನೆಯಲ್ಲಿ ಧೃಢಪಟ್ಟಿದೆ.
5-8 ವಾರಗಳಿಗೊಮ್ಮೆ ಪರ್ಮನೆಂಟ್ ಹೇರ್ ಡೈ ಬಳಸುತ್ತಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಂಭವ ಶೇ.60ರಷ್ಟು ಹೆಚ್ಚಾಗಿದೆ. ಸೆಮಿ ಪರ್ಮನೆಂಟ್ ಅಥವಾ ಟೆಂಪರರಿ ಹೇರ್ ಡೈ ಬಳಕೆಯಿಂದ ಇಂತಹ ಅಪಾಯವಿಲ್ಲ ಅಂತಾ ವಿಜ್ಞಾನಿಗಳು ಹೇಳಿದ್ದಾರೆ.