ಸೀರೆಗಳ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬನಾರಸ್ ಸೀರೆಗೆ ಹೊಸ ಆಯಾಮ ಈಗಾಗಲೇ ದೊರಕಿದೆ. ಬನಾರಸ್ ಸಂಸ್ಕೃತಿ ಬಿಂಬಿಸುವ ಸೀರೆ ಒಂದು ಈ ಹಿಂದೆ ತಯಾರಾಗಿದ್ದು, ಈ ಸೀರೆಯ ಹೆಸರು ‘ಮಜಹಬಿ ಸೀರೆ’.
ಈ ಸೀರೆ ಸಂಸ್ಕೃತಿಯ ದ್ಯೋತಕವೆಂದರೂ ತಪ್ಪಾಗದು. ಏಕೆಂದರೆ ಒಂದೇ ಸೀರೆಯಲ್ಲಿ ಬನಾರಸ್ ಬೀದಿ, ಗಂಗಾಘಾಟ್ ಮತ್ತು ಹಿಂದೂ ಸಂಸ್ಕೃತಿ ಈ ಎಲ್ಲದರ ಚಿತ್ರಣವಿದೆ. ಈ ಅಪರೂಪದ ಸೀರೆ ಜಗತ್ತಿನಲ್ಲಿ ಸುದ್ದಿ ಮಾಡಿತ್ತು.
ಬನಾರಸ್ ಸೀರೆಯ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ ಮತ್ತು ಬನಾರಸ್ ಸೀರೆಯನ್ನು ಇಂಡಸ್ಟ್ರಿಗೆ ತಲುಪಿಸಿದ ಹುಸೇನ್ ಇಲಿಯಾಸ್ ಅವರು ಈ ಸೀರೆಯನ್ನು ತಯಾರಿಸಿದ್ದರು. 6 ತಿಂಗಳ ಅವಧಿಯಲ್ಲಿ ತಯಾರಾದ ಈ ಸೀರೆಯ ಬೆಲೆ ಬರೋಬ್ಬರಿ 9 ಲಕ್ಷ ರೂಪಾಯಿಯಾಗಿತ್ತು.