ಮೊಡವೆ ಅನ್ನೋದು ಹದಿಹರೆಯದವರನ್ನು ಕಾಡೋ ಬಹುದೊಡ್ಡ ಸಂಗತಿ. ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲೂ ಮೊಡವೆ ಇದ್ದೇ ಇರುತ್ತೆ. ಈ ಪಿಂಪಲ್ ಪ್ರಾಬ್ಲಂಗೆ ಇಲ್ಲಿದೆ ನೋಡಿ ಪರಿಣಾಮಕಾರಿಯಾದ ಮನೆ ಮದ್ದುಗಳು.
ಮೊಡವೆ ಸಮಸ್ಯೆಗೆ ಐಸ್ ಅಥವಾ ಐಸ್ ಕ್ಯೂಬ್ ಪರಿಣಾಮಕಾರಿ ಔಷಧ. ಕೆಲ ಐಸ್ ಪೀಸ್ಗಳನ್ನು ಬಟ್ಟೆಯಲ್ಲಿ ಸುತ್ತಿ ಮೊಡವೆಯಾದ ಜಾಗದಲ್ಲಿಟ್ಟುಕೊಳ್ಳಿ. ಕೆಲ ನಿಮಿಷಗಳ ಬಳಿಕ ಮತ್ತೆ ಇದನ್ನು ಪುನರಾವರ್ತಿಸಿ. ಇದಲ್ಲದೇ ಮೊಡವೆಯಾದ ಜಾಗದಲ್ಲಿ ಸ್ಟೀಮ್ ಕೊಟ್ಟುಕೊಳ್ಳುವುದರಿಂದಲೂ ಮೊಡವೆ ಮಾಯವಾಗುತ್ತದೆ.
ಮೊಡವೆಗೆ ವೈಟ್ ಟೂತ್ ಪೇಸ್ಟ್ ರಾಮಬಾಣ. ಟೂತ್ ಪೇಸ್ಟ್ ಅನ್ನು ರಾತ್ರಿ ಮಲಗುವಾಗ ಮೊಡವೆಯಾದ ಜಾಗಕ್ಕೆ ಹಚ್ಚಿಕೊಂಡು ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಬೇಕು.
ಸ್ವಲ್ಪವೇ ಸ್ವಲ್ಪ ಚಹಾ ಮರದ ಎಣ್ಣೆಯನ್ನು ಅರ್ಧ ಕಪ್ ನೀರಿಗೆ ಬೆರೆಸಿ ಹತ್ತಿ ಉಂಡೆಯಿಂದ ಅದನ್ನು ಮೊಡವೆಯಾದ ಜಾಗಕ್ಕೆ ಹಚ್ಚಬೇಕು. ಹೀಗೆ ದಿನಕ್ಕೆ ಒಂದೆರಡು ಬಾರಿ ಮಾಡಿ ನೋಡಿ.
ಲವಂಗ ಎಣ್ಣೆ ಅಥವಾ ಲವಂಗ ಹೊಂದಿರುವ ಎಣ್ಣೆಯನ್ನೂ ಸಹ ಇದೇ ರೀತಿ ನೀರಿನಲ್ಲಿ ಬೆರೆಸಿ ಹಚ್ಚಿಕೊಳ್ಳಬಹುದು.
ಅಲೋವೆರಾ ಕೂಡಾ ಮೊಡವೆ ಕಡಿಮೆ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ನೇರವಾಗಿಯೂ ಮೊಡವೆಗೆ ಹಚ್ಚಿಕೊಳ್ಳಬಹುದು. ಅಥವಾ ಬೇರೆ ಯಾವುದಾದರೂ ಮನೆಮದ್ದಿನ ಜೊತೆಗೂ ಇದನ್ನು ಸೇರಿಸಿ ಹಚ್ಚಿಕೊಳ್ಳಬಹುದು.