HomeEntertainmentಕೆಆರ್‌ಕೆ ಅಚ್ಚರಿಯ ಟ್ವೀಟ್: ಧುರಂಧರ್ 2 ಬಳಿಕ ಕಾಂಗ್ರೆಸ್‌ಗೆ ಧನ್ಯವಾದಗಳು ಎಂದ ನಟ

ಕೆಆರ್‌ಕೆ ಅಚ್ಚರಿಯ ಟ್ವೀಟ್: ಧುರಂಧರ್ 2 ಬಳಿಕ ಕಾಂಗ್ರೆಸ್‌ಗೆ ಧನ್ಯವಾದಗಳು ಎಂದ ನಟ

ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಬಗ್ಗೆ ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್ ಖಾನ್ (KRK) ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ಕಾಲಾನುಕ್ರಮದ (Timeline) ತಪ್ಪುಗಳನ್ನು ಎತ್ತಿ ತೋರಿಸಿರುವ ಅವರು, ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವ ಮೂಲಕ ನಿರ್ದೇಶಕ ಆದಿತ್ಯ ಧರ್ ಅವರ ಕಾಲೆಳೆದಿದ್ದಾರೆ.

ಕಾಂಗ್ರೆಸ್ ಬಗ್ಗೆ ಕೆಆರ್‌ಕೆ ಹೇಳಿದ್ದೇನು? ಸಿನಿಮಾದಲ್ಲಿ ತೋರಿಸಲಾದ ಐತಿಹಾಸಿಕ ಘಟನೆಗಳನ್ನು ಪಟ್ಟಿ ಮಾಡಿರುವ ಕೆಆರ್‌ಕೆ, “1) 1968ರಲ್ಲಿ ಇಂದಿರಾ ಗಾಂಧಿಯವರು ‘ರಾ’ (RAW) ಸಂಸ್ಥೆಯನ್ನು ಸ್ಥಾಪಿಸಿದರು. 2) 1981ರಲ್ಲಿ ಇಂದಿರಾ ಜಿ ಅವರು ಜಮೀಲ್ ಜಮಾಲಿ ಎಂಬ ಏಜೆಂಟ್ ಅನ್ನು ಪಾಕಿಸ್ತಾನಕ್ಕೆ ಕಳುಹಿಸಿದರು. 3) 2004ರಲ್ಲಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ರಣವೀರ್ ಸಿಂಗ್ (ಸಿಖ್ ಹುಡುಗ) ಪಾತ್ರದ ಏಜೆಂಟ್ ಅನ್ನು ಪಾಕಿಸ್ತಾನಕ್ಕೆ ಕಳುಹಿಸಿದರು. 4) ಇಲ್ಯಾಸ್ ಕಾಶ್ಮೀರಿಯನ್ನು 2011ರಲ್ಲಿ ಮನ್ಮೋಹನ್ ಸಿಂಗ್ ಆಡಳಿತದಲ್ಲೇ ಹತ್ಯೆ ಮಾಡಲಾಯಿತು. 5) ಎಸ್‌ಪಿ ಚೌಧರಿ ಅಸ್ಲಾಂನನ್ನು 2014ರ ಜನವರಿಯಲ್ಲಿ ಮನ್ಮೋಹನ್ ಸಿಂಗ್ ಆಡಳಿತದಲ್ಲೇ ಕೊಲ್ಲಲಾಯಿತು” ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ವ್ಯಂಗ್ಯವಾಗಿ “ವಾವ್! ಕಾಂಗ್ರೆಸ್ ದೇಶಕ್ಕಾಗಿ ಎಷ್ಟು ಒಳ್ಳೆಯ ಕೆಲಸ ಮಾಡಿದೆ ಎಂದು ಸಿನಿಮಾ ಮೂಲಕ ಬಹಿರಂಗಪಡಿಸಿದ್ದಕ್ಕೆ ಆದಿತ್ಯ ಧರ್ ಭಾಯ್ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿನಿಮಾದಲ್ಲಿನ ತಪ್ಪುಗಳು ಮತ್ತು ವಿಮರ್ಶೆ: ಚಿತ್ರದಲ್ಲಿನ ತಾಂತ್ರಿಕ ಲೋಪಗಳನ್ನು ಎತ್ತಿ ತೋರಿಸಿರುವ ಕೆಆರ್‌ಕೆ, 2011ರಲ್ಲಿ ಮೃತಪಟ್ಟ ಪಾತ್ರವೊಂದು 2023ರ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿರುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾತ್ರವನ್ನು ಅನಗತ್ಯವಾಗಿ ವೈಭವೀಕರಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಆರ್‌ಕೆ ವಿಮರ್ಶೆಯ ಮುಖ್ಯಾಂಶಗಳು:

  • ದೀರ್ಘಾವಧಿಯ ಆಕ್ಷನ್: ಚಿತ್ರವು 4 ಗಂಟೆಗಳ ಕಾಲವಿದ್ದು, ರಣವೀರ್ ಸಿಂಗ್ ಅವರ 15 ನಿಮಿಷಗಳ ಸತತ ಫೈಟ್ ಮತ್ತು ಕ್ಲೈಮ್ಯಾಕ್ಸ್‌ನ 30 ನಿಮಿಷಗಳ ಆಕ್ಷನ್ ದೃಶ್ಯಗಳು ಬೋರ್ ಹೊಡೆಸುತ್ತವೆ. ಇದನ್ನು 2.5 ಗಂಟೆಗೆ ಕತ್ತರಿಸಿದ್ದರೆ ಸಿನಿಮಾ ಚೆನ್ನಾಗಿರುತ್ತಿತ್ತು.
  • ಅಶ್ಲೀಲ ಭಾಷೆ: ಚಿತ್ರದ ಪ್ರತಿ ಮೂರ್ನಾಲ್ಕು ಡೈಲಾಗ್‌ಗಳಲ್ಲಿ ಅವಾಚ್ಯ ಶಬ್ದಗಳಿವೆ. ಇದಕ್ಕೆ ಪ್ರೇಕ್ಷಕರು ಚಪ್ಪಾಳೆ ಹೊಡೆಯುತ್ತಿರುವುದು ಆಶ್ಚರ್ಯ ತಂದಿದೆ. ಬಾದ್‌ಶಾ ಅಥವಾ ನೋರಾ ಫತೇಹಿ ಹಾಡುಗಳನ್ನು ಟೀಕಿಸುವವರು ಈ ಸಿನಿಮಾದ ಡೈಲಾಗ್‌ಗಳನ್ನು ಏಕೆ ವಿರೋಧಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೂ, ಕೆಆರ್‌ಕೆ ಅವರ ಈ ‘ಪೋಸ್ಟ್‌ಮಾರ್ಟಮ್’ ವಿಮರ್ಶೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular