ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಭೂಮಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.18ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ.
ಆದೇಶ ಹಿಂಪಡೆಯುವಂತೆ ಕೋರಿ ರಾಹುಲ್ ಖರ್ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪುನಃ ವಿಚಾರಣೆಗೆ ಹೈಕೋರ್ಟ್ ಮುಂದಾಗಿದೆ. ಅ.30ರಂದು ಮರುವಿಚಾರಣೆಗೆ ನಿರ್ಧರಿಸಲಾಗಿದ್ದು, ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 18ರಂದು ಬಿಎನ್ಎಸ್ಎಸ್ ಸೆಕ್ಷನ್ 223 ಅಡಿಯ ಕೋರ್ಟ್ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿತ್ತು. ಪ್ರಮಾಣಪತ್ರದ ದೋಷ ಸರಿಪಡಿಸಲು ದೂರುದಾರರಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ಪೊಲೀಸರ ತನಿಖೆ ಕುರಿತಂತೆ ತೀರ್ಮಾನಿಸಲು ಸೂಚಿಸಿತ್ತು. 82ನೇ ಸಿಸಿಹೆಚ್ ಕೋರ್ಟ್ಗೆ ನೀಡಿದ್ದ ನಿರ್ದೇಶನ ಹಿಂಪಡೆದ ಹೈಕೋರ್ಟ್, ಪ್ರತಿವಾದ ಆಲಿಸಲು ಅ.30ರಂದು ಮರುವಿಚಾರಣೆಗೆ ನಿರ್ಧರಿಸಿದೆ.
2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ಸಿದ್ಧಾರ್ಥ ಟ್ರಸ್ಟ್ ಶೈಕ್ಷಣಿಕ ನೆಪ ನೀಡಿ ಬಿಡಿಎಯಿಂದ ಬಿಟಿಎಂ 4ನೇ ಸ್ಟೇಜ್ನ ಎರಡನೇ ಬ್ಲಾಕ್ನಲ್ಲಿ 2 ಎಕರೆಯಷ್ಟು ಸಿಎ ನಿವೇಶನವನ್ನು ಪರಭಾರೆ ಮಾಡಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಅದಾದ 10 ವರ್ಷಗಳ ಬಳಿಕ ಅದೇ ಶೈಕ್ಷಣಿಕ ನೆಪದಲ್ಲಿ ಬಾಗಲೂರು ಬಳಿ 5 ಏಕರೆಯಷ್ಟು ಕೆಐಎಡಿಬಿ ಭೂಮಿಯನ್ನು ಮತ್ತೆ ಅದೇ ಟ್ರಸ್ಟ್ ಹೆಸರಿಗೆ ಬರೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ನಿವೇಶಗಳ ಮೌಲ್ಯ ಬರೋಬ್ಬರಿ 240 ಕೋಟಿಗೂ ಅಧಿಕ ಎನ್ನಲಾಗಿತ್ತು.
ಈ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ವಿರುದ್ಧ ದೂರು ದಾಖಲಾಗಿತ್ತು. ಆರೋಪ ಬಂದ ನಂತರ ಜಮೀನು ಹಿಂತಿರುಗಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ವಿಜಯರಾಘವ ಮರಾಠೆ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.
ಸಿಜೆಪಿ ತಿರಂಗ ಯಾತ್ರೆ ಆರಂಭ: ರ್ಯಾಲಿಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ
ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ರಾಷ್ಟ್ರಧ್ವಜ ಕೈಯಲ್ಲಿ ಹಿಡಿದು ಸಾಗುವ ತಿರಂಗ ಯಾತ್ರೆ ಆರಂಭವಾಗಿದೆ. ಸಿಜೆಪಿ ಈ ಯಾತ್ರೆಗೆ ಆಮ್ ಆದ್ಮಿ ಪಕ್ಷ ಕೂಡ ಬೆಂಬಲ ನೀಡಿದೆ.
ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಿಕ್ಕಿರಿದ ಜನಸಂದಣಿ ನಡುವೆ ತಿರಂಗ ಯಾತ್ರೆ ಆರಂಭವಾಗಿದ್ದು, ಲಕ್ಷಾಂತರ ಜನರು ಪಾಲ್ಗೊಂಡಿದ್ದಾರೆ. ತಿರಂಗಾ ಯಾತ್ರೆಗೆ ತೆರಳಲು ಸಜ್ಜಾಗಿದ್ದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿರಂಗ ಯಾತ್ರೆ ಆರಂಭವಾಗುವುದಕ್ಕೂ ಮುನ್ನ ಸೆಖ್ಂತ್ರಲ್ ಪಾರ್ಕ್ ಬಳಿಯೇ ಅಭಿಜಿತ್ ದೀಪ್ಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಜೆಪಿಯ ತಿರಂಗ ಯಾತ್ರೆಗೆ ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ. ಆದಾಗ್ಯೂ ರ್ಯಾಲಿ ನಡೆಸಲು ಮುಂದಾಗಿದ್ದಕ್ಜೆ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಿಜೆಪಿ ತಿರಂಗಾ ಯಾತ್ರೆಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಶಾಂತಿಯುತವಾಗಿ ಹೋರಾಟ ನಡೆಸುವುದಾಗಿ ಸಿಜೆಪಿ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು, ಆದಾಗ್ಯೂ ದೆಹಲಿ ಪೊಲೀಸರು ಹೈಕೋರ್ಟ್ ಆದೇಶ ಉಲ್ಲಂಗ್ಜಿಸಿ ಸಿಜೆಪಿ ನಾಯಕರನ್ನು ವಶಕ್ಕೆ ಪಡೆಯುತ್ತಿದ್ದು, ತಿರಂಗ ಯಾತ್ರೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಸಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಜಿತ್ ದೀಪ್ಕೆ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದ ಪೊಲೀಸರು:
ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ನಿವಾಸಕ್ಕೆ ಇಂದು ತೆರಳಿದ್ದ ದೆಹಲಿ ಪೊಲೀಸರು, ರ್ಯಾಲಿ ನಡೆಸದಂತೆ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದರು. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರು ನೀಡಿದ ನೋಟಿಸ್ ಪರಿಶೀಲಿಸಿದ ಅಭಿಜಿತ್ ದೀಪ್ಕೆ, “ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ನಿರಂತರವಾಗಿ ಪ್ರಚೋದಿಸುತ್ತಿದ್ದೀರಿ, ಇದು ಕಾನೂನುಬಾಹಿರ” ಎಂಬ ಅಂಶ ಆ ನೋಟಿಸ್ನಲ್ಲಿತ್ತು. ಇದನ್ನು ಓದಿ ಆಕ್ರೋಶಗೊಂಡ ದೀಪ್ಕೆ ನನ್ನ ಮೇಲೆ ಇಂಥದ್ದೊಂದು ಆರೋಪವನ್ನು ಹೇಗೆ ಹೊರಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
“ನೀವೇನು ತಮಾಷೆ ಮಾಡುತ್ತಿದ್ದೀರಾ? ಇದೇನಾ ನೋಟೀಸ್ ನೀಡುವ ರೀತಿ? ನಿಮ್ಮ ಮನಸ್ಸಿಗೆ ಬಂದಿದ್ದನ್ನೆಲ್ಲಾ ಬರೆದುಕೊಂಡು ಬರುತ್ತಿದ್ದೀರಿ. ನೇರವಾಗಿ ನನ್ನನ್ನು ಗಲ್ಲಿಗೇರಿಸಿ ಬಿಡಿ, ಇದ್ಯಾವ ರೀತಿಯ ತಮಾಷೆ?” ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ತಾನು ಸಾರ್ವಜನಿಕರನ್ನು ಹಿಂಸಾಚಾರಕ್ಕೆ ಪ್ರಚೋದಿಸಿರುವ ಕನಿಷ್ಠ ಒಂದು ವಿಡಿಯೋವನ್ನಾದರೂ ತೋರಿಸುವಂತೆ ಪೊಲೀಸರಿಗೆ ದೀಪ್ಕೆ ಸವಾಲು ಹಾಕಿದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಭಿಜಿತ್ ದೀಪ್ಕೆ ಬಾಂಡ್ ಸೇರಿದಂತೆ ಕೆಲವು ದಾಖಲೆಗಳಿಗೆ ಸಹಿ ಮಾಡುತ್ತಿರುವುದು ಕಂಡುಬಂದಿದೆ. ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 29ರ ಅಡಿಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ ನಿರ್ದೇಶನಗಳನ್ನು ನೀಡಲು ಪೊಲೀಸರಿಗೆ ಈ ಸೆಕ್ಷನ್ ಅಡಿಯಲ್ಲಿ ಅಧಿಕಾರವಿದೆ. ಆದರೆ, ಸೆಕ್ಷನ್ 29 ಪೊಲೀಸರಿಗೆ ಪ್ರತಿಭಟನೆಯನ್ನು ಬೇರೆ ಯಾವ ಷರತ್ತುಗಳಿಲ್ಲದೆ ಸಂಪೂರ್ಣವಾಗಿ ನಿಷೇಧಿಸುವ ಅಧಿಕಾರವನ್ನು ನೀಡುವುದಿಲ್ಲ.
ಇಂದು ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ರಾಷ್ಟ್ರಧ್ವಜದೊಂದಿಗೆ ಜಮಾಯಿಸುವಂತೆ ದೀಪ್ಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದ್ದ ಜಂತರ್ ಮಂತರ್ಗೆ ಅಕ್ರಮವಾಗಿ ಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕ ಅವರನ್ನು ಬಂಧಿಸಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಬೆನ್ನಲ್ಲೇ ದೀಪ್ಕೆ ಈ ಕರೆ ನೀಡಿದ್ದರು.
ಸಿಜೆಪಿ ರ್ಯಾಲಿಯ ಹಿನ್ನೆಲೆಯಲ್ಲಿ ಕನ್ನಾಟ್ ಪ್ಲೇಸ್ ಸುತ್ತಮುತ್ತ ಸುಮಾರು 6,000ಕ್ಕೂ ಹೆಚ್ಚು ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರದೇಶವು ಕೋಟೆಯಾಗಿ ಪರಿವರ್ತನೆಯಾಗಿದೆ. 5 ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ 144ರ ಮಾದರಿಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನೆಗೆ ಯಾವುದೇ ಅಧಿಕೃತ ಅನುಮತಿ ನೀಡಿಲ್ಲವಾದರೂ, ಸೂಕ್ತ ಸ್ಥಳದಲ್ಲಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು 11 ಜನರ ಆಯ್ಕೆಯಾದ ಗುಂಪಿಗೆ ಮಾತ್ರ ಅನುಮತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

