HomeKarnatakaBIG NEWS : ವಾಹನ ಸವಾರರಿಗೆ ಬಿಗ್ ಶಾಕ್ ; ರಾಜ್ಯದ 9 ರಾಷ್ಟ್ರೀಯ...

BIG NEWS : ವಾಹನ ಸವಾರರಿಗೆ ಬಿಗ್ ಶಾಕ್ ; ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಭಾರಿ ಏರಿಕೆ.!

ಬೆಂಗಳೂರು : ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಪ್ರಿಲ್ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಪರಿಷ್ಕರಿಸಿದೆ. ಈ ಹೊಸ ದರ ಪಟ್ಟಿಯ ಅನ್ವಯ ರಾಜ್ಯದ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವ ವಾಹನ ಸವಾರರು ಹೆಚ್ಚಿನ ಹಣ ಪಾವತಿಸಬೇಕಿದೆ.

ದರ ಏರಿಕೆ ಆಗಿರುವ ಪ್ರಮುಖ ಹೆದ್ದಾರಿಗಳು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ : ರಾಜ್ಯದ ಅತಿ ಪ್ರಮುಖ ರಸ್ತೆಯಾದ ಇದರ ಟೋಲ್ ದರದಲ್ಲಿ ಸುಮಾರು 3% ರಿಂದ 5% ರಷ್ಟು ಏರಿಕೆಯಾಗಿದೆ. ಕಾರು ಮತ್ತು ಲಘು ವಾಹನಗಳ ದರದಲ್ಲಿ 5 ರಿಂದ 10 ರೂ. ಹೆಚ್ಚಳವಾಗಿದ್ದರೆ, ಭಾರಿ ವಾಹನಗಳಿಗೆ ಹೆಚ್ಚಿನ ಹೊರೆ ಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಉಪನಗರ ವರ್ತುಲ ರಸ್ತೆ(STRR ): ಹೊಸದಾಗಿ ಆರಂಭವಾಗಿರುವ ದಾಬಸ್‌ಪೇಟೆ-ಹೊಸಕೋಟೆ ರಸ್ತೆಯ ಟೋಲ್ ಕೂಡ ಏರಿಕೆಯಾಗಿದೆ.

ಬಳ್ಳಾರಿ ರಸ್ತೆ(ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ) : ಏರ್‌ಪೋರ್ಟ್‌ಗೆ ಹೋಗುವ ಸಾದಹಳ್ಳಿ ಟೋಲ್ ದರದಲ್ಲೂ ಏರಿಕೆಯಾಗಿದ್ದು, ಕಾರುಗಳ ಏಕಮುಖ ಸಂಚಾರಕ್ಕೆ ಈಗ 120 ರೂ. ಪಾವತಿಸಬೇಕಿದೆ.

ಬೆಂಗಳೂರು-ತುಮಕೂರು ರಸ್ತೆ: ನೆಲಮಂಗಲ ಬಳಿಯ ಟೋಲ್ ದರಗಳಲ್ಲೂ ಬದಲಾವಣೆಯಾಗಿದೆ.

ಬೆಂಗಳೂರು-ಕೋಲಾರ ಹೆದ್ದಾರಿ: ಚೆನ್ನೈ ಕಡೆಗೆ ಹೋಗುವ ರಸ್ತೆಯ ಟೋಲ್ ದರಗಳು ಹೆಚ್ಚಳವಾಗಿವೆ.

ರಾಷ್ಟ್ರೀಯ ಹೆದ್ದಾರಿ ಸಂಖ್ಯೆಮಾರ್ಗ / ಸಂಪರ್ಕಿಸುವ ನಗರಗಳುಪ್ರಮುಖ ಟೋಲ್ ಪ್ಲಾಜಾಗಳು
NH-48ಬೆಂಗಳೂರು – ತುಮಕೂರು – ಹಾವೇರಿ – ಬೆಳಗಾವಿ (ಮುಂಬೈ ಮಾರ್ಗ)ನೆಲಮಂಗಲ, ಕ್ಯಾತಸಂದ್ರ, ಕರಜೀವನಹಳ್ಳಿ (ತುಮಕೂರು), ಗುಯಿಲಾಲು (ಹಿರಿಯೂರು), ಹೆಬ್ಬಾಳು (ಚಿತ್ರದುರ್ಗ), ಚಳಗೇರಿ (ಹಾವೇರಿ), ಬಂಕಾಪುರ, ಬಾಗೇವಾಡಿ, ವರೂರು, ಹತ್ತರಗಿ, ಕೊಗ್ನೋಳಿ(ಬೆಳಗಾವಿ).
NH-275ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಕಣಿಮಿಣಿಕೆ (ಬೆಂಗಳೂರು ಸಮೀಪ), ಶೇಷಗಿರಿಹಳ್ಳಿ, ಗಣಂಗೂರು
NH-44ಬೆಂಗಳೂರು – ಹೈದರಾಬಾದ್ ಮಾರ್ಗದೇವನಹಳ್ಳಿ (ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ), ಬಾಗೇಪಲ್ಲಿ.
NH-75 (ಪಶ್ಚಿಮ)ಬೆಂಗಳೂರು – ಹಾಸನ – ಮಂಗಳೂರುಕರೇಹಳ್ಳಿ (ನೆಲಮಂಗಲ ಸಮೀಪ), ಶಾಂತಿಗ್ರಾಮ (ಹಾಸನ), ಬ್ರಹ್ಮರಕೂಟ್ಲು
NH-75 (ಪೂರ್ವ)ಬೆಂಗಳೂರು – ಹೊಸಕೋಟೆ – ಕೋಲಾರಹೊಸಕೋಟೆ, ಮುಳಬಾಗಿಲು.
NH-66ಮಂಗಳೂರು – ಉಡುಪಿ – ಕುಂದಾಪುರ (ಕರಾವಳಿ ಹೆದ್ದಾರಿ)ತಲಪಾಡಿ, ಹೆಜಮಾಡಿ, ಸಾಸ್ತಾನ (ಉಡುಪಿ), ಶಿರೂರು (ಕುಂದಾಪುರ).
NH-50 / 52ವಿಜಯಪುರ – ಹೊಸಪೇಟೆ – ಚಿತ್ರದುರ್ಗಮಿಣಜಗಿ, ಗುಳ್ಳಾಲು, ಹಿತ್ತಲ್ (ಹೊಸಪೇಟೆ),ಗುಳ್ಳಾಲು, ಗುಡ್ಡದ ರಂಗವನಹಳ್ಳಿ, ವಾಣಿವಿಲಾಸ ಸಾಗರ.
NH-150Aಹಿರಿಯೂರು – ಬಳ್ಳಾರಿ – ಜೇವರ್ಗಿಚಳ್ಳಕೆರೆ ಮತ್ತು ಮೊಳಕಾಲ್ಮೂರು ಸಮೀಪದ ಕೇಂದ್ರಗಳು.
NH-766ಮೈಸೂರು – ಗುಂಡ್ಲುಪೇಟೆ (ಕೇರಳ ಮಾರ್ಗ)ಕಡಕೊಳ

ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ನಿಯಮಗಳು

ವಾರ್ಷಿಕ ಪಾಸ್ ದರ ಏರಿಕೆ: : ಎನ್‌ಎಚ್‌ಎಐ ಫಾಸ್ಟ್ಯಾಗ್ (FASTag) ವಾರ್ಷಿಕ ಪಾಸ್ ದರವನ್ನು 3,000 ರೂ.ನಿಂದ 3,075 ರೂ.ಗೆ ಹೆಚ್ಚಿಸಿದೆ.

ಇ-ನೋಟಿಸ್(e-notice) ವ್ಯವಸ್ಥೆ : ಟೋಲ್ ಪಾವತಿಸದೆ ಹೋಗುವ ವಾಹನಗಳಿಗೆ ಈಗ ಇ-ನೋಟಿಸ್ ಜಾರಿಯಾಗಲಿದೆ. ನೋಟಿಸ್ ಬಂದ 72 ಗಂಟೆಯೊಳಗೆ ಹಣ ಪಾವತಿಸಿದರೆ ಮೂಲ ದರ ಅನ್ವಯವಾಗುತ್ತದೆ, ಇಲ್ಲದಿದ್ದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ.

ವಾಹನ ವರ್ಗಾವಣೆ ನಿರ್ಬಂಧ : ಟೋಲ್ ಬಾಕಿ ಉಳಿಸಿಕೊಂಡಿರುವ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಅಥವಾ ವಾಹನ ವರ್ಗಾವಣೆಗೆ ಎನ್‌ಒಸಿ (NOC) ಸಿಗುವುದಿಲ್ಲ.

ಯಾವ ವಾಹನಕ್ಕೆ ಎಷ್ಟು ಏರಿಕೆ ?

ಸಾಮಾನ್ಯವಾಗಿ ಕಾರು, ಜೀಪ್ ಮತ್ತು ವ್ಯಾನ್‌ಗಳಂತಹ ಲಘು ವಾಹನಗಳಿಗೆ ಒಂದು ಬದಿಯ ಸಂಚಾರಕ್ಕೆ 5 ರೂ.ನಿಂದ 10 ರೂ. ಹೆಚ್ಚಳವಾಗಿದ್ದರೆ, ಬಸ್ ಮತ್ತು ಟ್ರಕ್‌ಗಳಂತಹ ಭಾರಿ ವಾಹನಗಳಿಗೆ 15 ರೂ.ನಿಂದ 30 ರೂ.ವರೆಗೆ ಏರಿಕೆಯಾಗಿದೆ.

ಗಮನಿಸಿ: ಹಣದುಬ್ಬರ ಮತ್ತು ರಸ್ತೆ ನಿರ್ವಹಣಾ ವೆಚ್ಚವನ್ನು ಆಧರಿಸಿ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಈ ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಇರುವ ದರಗಳು (ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ)

ವಾಹನದ ಪ್ರಕಾರಏಕಮುಖ ಸಂಚಾರ (ರೂ.)ಹೋಗಿ ಬರಲು (ರೂ.)
ಕಾರು / ಜೀಪ್ / ವ್ಯಾನ್180270
ಲಘು ವಾಣಿಜ್ಯ ವಾಹನಗಳು290430
ಬಸ್ / ಟ್ರಕ್ (2-ಆಕ್ಸಲ್)605905
3-ಆಕ್ಸಲ್ ವಾಹನಗಳು660990
ಭಾರಿ ಯಂತ್ರೋಪಕರಣ ವಾಹನಗಳು9451420
7 ಅಥವಾ ಹೆಚ್ಚು ಆಕ್ಸಲ್ ವಾಹನಗಳು11551730

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular