ದಿನಕ್ಕೊಂದು ಆಪಲ್ ತಿಂದರೆ ಆರೋಗ್ಯವಾಗಿರಬಹುದೆಂದು ಬಲ್ಲವರು ಹೇಳುತ್ತಾರೆ. ಆಪಲ್ ನಲ್ಲಿ ವಿಶೇಷವಾದ ಪಾಯಸ ಮಾಡಬಹುದಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
3-4 ಸೇಬು ಹಣ್ಣುಗಳು, 3 ಕಪ್ ಹಾಲು, 3 -4 ಒಣ ಅಂಜೂರ, 12 -14 ಒಣ ದ್ರಾಕ್ಷಿ, 3 -4 ಟೀ ಚಮಚ ತುಪ್ಪ, ¼ ಚಮಚ ಏಲಕ್ಕಿ ಪುಡಿ, ಒಂದೂವರೆ ಕಪ್ ಸಕ್ಕರೆ, 2 ಟೀ ಚಮಚ ಚಿರೋಟಿ ರವೆ.
ತಯಾರಿಸುವ ವಿಧಾನ:
ಚೆನ್ನಾಗಿ ಮಾಗಿದ ಸೇಬು ಹಣ್ಣುಗಳನ್ನು ತೊಳೆದು ಸಿಪ್ಪೆ ತೆಗೆಯಿರಿ. ಸಣ್ಣಗೆ ಹೋಳು ಮಾಡಿ, ಸ್ವಲ್ಪ ತುಪ್ಪದಲ್ಲಿ ಒಣ ದ್ರಾಕ್ಷಿಯನ್ನು ಮತ್ತು ರವೆಯನ್ನು ಕೆಂಪಗೆ ಹುರಿಯಿರಿ.
ಅಂಜೂರದ ಹಣ್ಣುಗಳನ್ನು ಸಣ್ಣಗೆ ಚೂರು ಮಾಡಿಕೊಳ್ಳಿ, 2 ಕಪ್ ಹಾಲಿನಲ್ಲಿ ಸೇಬಿನ ಹೋಳುಗಳನ್ನು ಹದವಾಗಿ ಬೇಯಿಸಿಕೊಳ್ಳಿ.
ಬಳಿಕ ಉಳಿದ ಹಾಲು ಹಾಕಿ ಸಕ್ಕರೆ ಹಾಕಿ ಕುದಿಸಿರಿ. ಕುದಿಯುತ್ತಿರುವ ಪದಾರ್ಥಕ್ಕೆ ಹುರಿದುಕೊಂಡ ರವೆ, ದ್ರಾಕ್ಷಿ, ಅಂಜೂರ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿರಿ. 10 ನಿಮಿಷ ಕಾಲ ಬೇಯಿಸಿ ನಂತರ ಒಲೆಯಿಂದ ಕೆಳಗೆ ಇಳಿಸಿರಿ.