ಮುಂಬೈ/ಹೈದರಾಬಾದ್ : ಚಲಾವಣೆಯಿಂದ ಹಿಂಪಡೆಯಲಾದ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇ. 98.42 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹೌದು, ಶೇ. 98.42 ರಷ್ಟು 2 ಸಾವಿರ ರೂ. ನೋಟುಗಳನ್ನು ಹಿಂಪಡೆಯಲಾಗಿದೆ ಎಂದು RBI ಪ್ರಕಟಣೆ ಹೊರಡಿಸಿದೆ. ಈ ವರ್ಷದ (2026) ಜನವರಿ 31ರ ಅಂಕಿಅಂಶಗಳ ಪ್ರಕಾರ, ಇನ್ನೂ ₹5,609 ಕೋಟಿ ಮೌಲ್ಯದ ₹2,000 ನೋಟುಗಳು ಸಾರ್ವಜನಿಕರ ಬಳಿಯೇ ಉಳಿದಿವೆ.ಮೇ 19, 2023 ರಂದು ನೋಟು ಹಿಂಪಡೆಯುವ ಘೋಷಣೆ ಮಾಡಿದಾಗ ಮಾರುಕಟ್ಟೆಯಲ್ಲಿ ಒಟ್ಟು ₹3.56 ಲಕ್ಷಕೋಟಿ ಮೌಲ್ಯದ ₹2,000 ನೋಟುಗಳು ಚಲಾವಣೆಯಲ್ಲಿದ್ದವು.ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದ್ದರೂ ಸಹ, ಇವು ಇಂದಿಗೂ ಕಾನೂನುಬದ್ಧವಾಗಿಮಾನ್ಯತೆ(Legal Tender) ಹೊಂದಿವೆ.
ನೋಟು ಬದಲಾಯಿಸಿಕೊಳ್ಳುವುದು ಹೇಗೆ ?
ಯಾರ ಬಳಿಯಾದರೂ ಇನ್ನೂ ಈ ನೋಟುಗಳು ಉಳಿದಿದ್ದರೆ, ಈ ಕೆಳಗಿನ ಮಾರ್ಗಗಳ ಮೂಲಕ ಬದಲಾಯಿಸಿಕೊಳ್ಳಬಹುದು.
- ಆರ್‌ಬಿಐ ಕಚೇರಿಗಳು: ದೇಶದ 19 ಆರ್‌ಬಿಐ ಪ್ರಾದೇಶಿಕ ಕಚೇರಿಗಳಲ್ಲಿ ನೇರವಾಗಿ ಠೇವಣಿ ಮಾಡಬಹುದು ಅಥವಾ ಬದಲಾಯಿಸಿಕೊಳ್ಳಬಹುದು.
- ಪೋಸ್ಟ್ ಆಫೀಸ್: ಸಾರ್ವಜನಿಕರು ತಮ್ಮ ಬಳಿ ಇರುವ ನೋಟುಗಳನ್ನು ಭಾರತೀಯ ಅಂಚೆ ಮೂಲಕ ಆರ್‌ಬಿಐ ಕಚೇರಿಗಳಿಗೆ ಕಳುಹಿಸಿ, ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಿಸಿಕೊಳ್ಳಬಹುದು.
- ಅಕ್ಟೋಬರ್ 9, 2023 ರಿಂದ: ವ್ಯಕ್ತಿಗಳು ಮತ್ತು ಸಂಸ್ಥೆಗಳು ಆರ್‌ಬಿಐ ಕಚೇರಿಗಳಲ್ಲಿ ನೋಟು ನೀಡಿ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಮಾಡಿಸಿಕೊಳ್ಳುವ ಅವಕಾಶವನ್ನು ಆರ್‌ಬಿಐ ಮುಂದುವರಿಸಿದೆ.

