HomeLifestyleಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಅಮೃತ ಈ ತುಪ್ಪ: ದಿನವೂ ಬಳಸುವುದರಿಂದ ಸಿಗುವ ಲಾಭಗಳೇನು?

ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಅಮೃತ ಈ ತುಪ್ಪ: ದಿನವೂ ಬಳಸುವುದರಿಂದ ಸಿಗುವ ಲಾಭಗಳೇನು?

ನಮ್ಮ ಪೂರ್ವಜರ ಕಾಲದಿಂದಲೂ ತುಪ್ಪಕ್ಕೆ ಭಾರತೀಯ ಅಡುಗೆಮನೆಯಲ್ಲಿ ಮತ್ತು ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಆಧುನಿಕ ಆಹಾರ ಪದ್ಧತಿಯಲ್ಲಿ ತುಪ್ಪವನ್ನು ಕೊಬ್ಬಿನಂಶವೆಂದು ದೂರವಿಟ್ಟವರು ಈಗ ಅದರ ಮಹತ್ವವನ್ನರಿತು ಮತ್ತೆ ಬಳಸತೊಡಗಿದ್ದಾರೆ. ತುಪ್ಪವು ಕೇವಲ ರುಚಿಯನ್ನಷ್ಟೇ ಅಲ್ಲದೆ, ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ತುಪ್ಪದ ಒಂಬತ್ತು ಪ್ರಮುಖ ಪ್ರಯೋಜನಗಳು ಇಲ್ಲಿವೆ:

1. ದೇಹವನ್ನು ಬೆಚ್ಚಗಿಡುತ್ತದೆ: ಆಯುರ್ವೇದದ ಪ್ರಕಾರ, ತುಪ್ಪವು ದೇಹದ ಒಳಗಿನ ಉಷ್ಣತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ತಯಾರಿಸುವ ಗಜ್ಜರಿ ಹಲ್ವಾ ಅಥವಾ ಲಡ್ಡುಗಳಲ್ಲಿ ತುಪ್ಪವನ್ನು ಹೇರಳವಾಗಿ ಬಳಸಲಾಗುತ್ತದೆ.

2. ಮೂಗು ಕಟ್ಟುವ ಸಮಸ್ಯೆಗೆ ಪರಿಹಾರ: ನೆಗಡಿಯಾದಾಗ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆಯಾದರೆ, ಹನಿ ಹನಿ ಬೆಚ್ಚಗಿನ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಹಾಕುವುದರಿಂದ ಆಯುರ್ವೇದದಲ್ಲಿ ‘ನ್ಯಾಸ’ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಇದು ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3. ಚೈತನ್ಯದ ಮೂಲ: ತುಪ್ಪವು ಶಕ್ತಿಯ ಉತ್ತಮ ಮೂಲವಾಗಿದೆ. ಇದರಲ್ಲಿರುವ ಲಾರಿಕ್ ಆಮ್ಲವು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿದೆ. ಬಾಣಂತಿಯರಿಗೆ ಮತ್ತು ಕ್ರೀಡಾಪಟುಗಳಿಗೆ ತುಪ್ಪದ ಪದಾರ್ಥಗಳನ್ನು ನೀಡುವುದು ಇದೇ ಕಾರಣಕ್ಕೆ.

4. ತೂಕ ಇಳಿಕೆಗೆ ಸಹಕಾರಿ: ತೂಕ ಇಳಿಸುವವರು ಕೊಬ್ಬನ್ನು ಸಂಪೂರ್ಣವಾಗಿ ಬಿಡಬಾರದು. ತುಪ್ಪದಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ ದೇಹದ ಕೆಟ್ಟ ಕೊಬ್ಬನ್ನು ಕರಗಿಸಲು ಮತ್ತು ಮೆಟಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ.

5. ಕರುಳಿನ ಆರೋಗ್ಯ: ತುಪ್ಪದಲ್ಲಿ ಬ್ಯುಟಿರಿಕ್ ಆಮ್ಲವಿದ್ದು, ಇದು ಕರುಳಿನ ಗೋಡೆಗಳನ್ನು ಸದೃಢವಾಗಿಡಲು ಮತ್ತು ಜೀರ್ಣಕ್ರಿಯೆ ಸುಗಮವಾಗಿಸಲು ನೆರವಾಗುತ್ತದೆ.

6. ಮಧುಮೇಹಿಗಳಿಗೆ ಉಪಯುಕ್ತ: ಚಪಾತಿ ಅಥವಾ ರೊಟ್ಟಿಯ ಮೇಲೆ ತುಪ್ಪ ಹಚ್ಚಿ ತಿನ್ನುವುದರಿಂದ ಅದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವುದಿಲ್ಲ ಮತ್ತು ಜೀರ್ಣಕ್ರಿಯೆ ಸುಲಭವಾಗುತ್ತದೆ.

7. ಮಲಬದ್ಧತೆ ನಿವಾರಣೆ: ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಬೆರೆಸಿ ಕುಡಿಯುವುದು ಮಲಬದ್ಧತೆ ಸಮಸ್ಯೆಗೆ ರಾಮಬಾಣ.

8. ಹೃದಯದ ಆರೋಗ್ಯಕ್ಕೆ ಒಳ್ಳೆಯದು: ರಿಫೈನ್ಡ್ ಆಯಿಲ್‌ಗಳಿಗೆ ಹೋಲಿಸಿದರೆ ತುಪ್ಪವು ಹೃದಯಕ್ಕೆ ಸುರಕ್ಷಿತ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಪೂರಕವಾಗಿದೆ.

9. ಚರ್ಮದ ಕಾಂತಿ ಹೆಚ್ಚಳ: ತುಪ್ಪವು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ಒಣ ಚರ್ಮವನ್ನು ಮೃದುಗೊಳಿಸಿ, ಮುಖದ ಮೇಲೆ ನೈಸರ್ಗಿಕ ಹೊಳಪನ್ನು ತರುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular