HomeBeautyಅಕಾಲಿಕವಾಗಿ ಬಿಳಿಯಾಗುತ್ತಿರುವ ಕೂದಲಿಗೆ ಬ್ರೇಕ್ ಹಾಕಿ: ಅಡುಗೆ ಮನೆಯ ಈ 5 ವಸ್ತುಗಳಲ್ಲಿದೆ ಪರಿಹಾರ

ಅಕಾಲಿಕವಾಗಿ ಬಿಳಿಯಾಗುತ್ತಿರುವ ಕೂದಲಿಗೆ ಬ್ರೇಕ್ ಹಾಕಿ: ಅಡುಗೆ ಮನೆಯ ಈ 5 ವಸ್ತುಗಳಲ್ಲಿದೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿ ಇಲ್ಲದೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಅಕಾಲಿಕವಾಗಿ ಕೂದಲು ಬಿಳಿಯಾಗುವುದು. ಮಾನಸಿಕ ಒತ್ತಡ, ಪೌಷ್ಟಿಕಾಂಶದ ಕೊರತೆ ಮತ್ತು ಬದಲಾದ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಯಾವುದೇ ರಾಸಾಯನಿಕಗಳ ಮೊರೆ ಹೋಗುವ ಬದಲು, ನಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಕೂದಲಿನ ನೈಸರ್ಗಿಕ ಬಣ್ಣವನ್ನು ಉಳಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸಾರ್ ಸಾವಲಿಯಾ ತಿಳಿಸಿದ್ದಾರೆ. ಕೂದಲು ಬಿಳಿಯಾಗುವುದನ್ನು ತಡೆಯಲು ಸಹಕಾರಿಯಾದ 5 ಆಹಾರಗಳು ಇಲ್ಲಿವೆ:

1. ಆಮ್ಲಾ ಅಥವಾ ನೆಲ್ಲಿಕಾಯಿ ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಇದು ಕೂದಲಿಗೆ ಒಳಗಿನಿಂದ ಪೋಷಣೆ ನೀಡಿ ಅಕಾಲಿಕ ನರೆತವನ್ನು ನಿಧಾನಗೊಳಿಸುತ್ತದೆ. ಇದನ್ನು ಜ್ಯೂಸ್ ರೂಪದಲ್ಲಿ, ಚೂರ್ಣದ ರೂಪದಲ್ಲಿ ಅಥವಾ ತಾಜಾ ಹಣ್ಣಿನಂತೆ ಸೇವಿಸಬಹುದು.

2. ಕಪ್ಪು ಎಳ್ಳು ಕಪ್ಪು ಎಳ್ಳು ಕೂದಲಿನ ಮೆಲನೋಸೈಟ್ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಕೂದಲಿನ ನೈಸರ್ಗಿಕ ಕಪ್ಪು ಬಣ್ಣವನ್ನು ಕಾಯ್ದುಕೊಳ್ಳಲು ಮುಖ್ಯವಾಗಿದೆ. ಪ್ರತಿದಿನ ಒಂದು ಚಮಚ ಎಳ್ಳನ್ನು ಸೇವಿಸುವುದು ಅಥವಾ ಚಪಾತಿ ಹಿಟ್ಟಿನೊಂದಿಗೆ ಬೆರೆಸಿ ಬಳಸುವುದು ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3. ಒಣ ದ್ರಾಕ್ಷಿ ಕಪ್ಪು ಒಣ ದ್ರಾಕ್ಷಿಯಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಮತ್ತು ಬಣ್ಣಕ್ಕೆ ಪೂರಕವಾಗಿದೆ. ಐದಾರು ಒಣ ದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಸೇವಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

4. ಕರಿಬೇವು ಕರಿಬೇವಿನಲ್ಲಿ ವಿಟಮಿನ್ ಎ, ಬಿ, ಸಿ, ಬಿ12 ಜೊತೆಗೆ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುವುದಲ್ಲದೆ, ಬಿಳಿ ಕೂದಲು ಬರದಂತೆ ತಡೆಯುತ್ತದೆ. ದಿನನಿತ್ಯದ ಅಡುಗೆಯಲ್ಲಿ ಅಥವಾ ಚಟ್ನಿ ರೂಪದಲ್ಲಿ ಕರಿಬೇವು ಬಳಸುವುದು ಹಿತಕರ.

5. ಆಕಳ ತುಪ್ಪ ಆಯುರ್ವೇದದ ಪ್ರಕಾರ ಎ2 ಆಕಳ ತುಪ್ಪವು ಕೂದಲಿನ ಪೋಷಣೆಗೆ ಅತ್ಯುತ್ತಮ. ಇದು ಕೂದಲಿನ ಬೇರುಗಳನ್ನು ಗಟ್ಟಿಗೊಳಿಸಿ, ನೈಸರ್ಗಿಕ ಕಾಂತಿಯನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಮಿತವಾಗಿ ತುಪ್ಪದ ಸೇವನೆ ಮಾಡುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular