alex Certify ಇದೆಂತಹ ದುರ್ವಿಧಿ….ಕಬ್ಬಿನ ಗದ್ದೆಯಲ್ಲಿದ್ದ ಕುರಿಗಾಹಿಗಳ ಮೇಲೆ ಹರಿದ ಲಾರಿ; ಇಬ್ಬರು ಸ್ಥಳದಲ್ಲೇ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೆಂತಹ ದುರ್ವಿಧಿ….ಕಬ್ಬಿನ ಗದ್ದೆಯಲ್ಲಿದ್ದ ಕುರಿಗಾಹಿಗಳ ಮೇಲೆ ಹರಿದ ಲಾರಿ; ಇಬ್ಬರು ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ: ಸಾವು ಎನ್ನುವುದು ಯಾವ ರೂಪದಲ್ಲಿ ಯಾವ ಕ್ಷಣ್ದಲ್ಲಾದರೂ ಬರಬಹುದು. ಕಬ್ಬಿನ ಗದ್ದೆಯಲ್ಲಿ ಕುರಿಗಳನ್ನು ಕಟ್ಟಿಹಾಕಿ, ಅಲ್ಲಿಯೇ ಮಲಗಿದ್ದ ಕುರಿಗಾಹಿಗಳ ಮೇಲೆ ಲಾರಿಯೊಂದು ಹರಿದು ಇಬ್ಬರು ಕುರಿಗಾಹಿಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಸಿದ್ದಪ್ಪ (51) ಯರ್ರಿಸ್ವಾಮಿ (20) ಮೃತರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗ್ರಾಮವೊಂದರ ಕಬ್ಬಿನ ಗದ್ದೆಯಲ್ಲಿ ಕುರಿಗಳನ್ನು ಕಟ್ಟಿಹಾಕಿ, ಕುರಿಗಾಹಿಗಳು ಮಲಗಿದ್ದರು.

ಈ ವೇಳೆ ಕಬ್ಬು ಲೋಡ್ ಮಾಡಲೆಂದು ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ಕುರಿಗಾಹಿಗಳ ಮೇಲೆ ಹರಿದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...