alex Certify ತಡರಾತ್ರಿವರೆಗೂ ಪಾರ್ಟಿ: ರೂಮ್ ನಲ್ಲಿ ಮಲಗಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿವರೆಗೂ ಪಾರ್ಟಿ: ರೂಮ್ ನಲ್ಲಿ ಮಲಗಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಸಹಪಾಠಿಯನ್ನು ಪಾರ್ಟಿಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಭಾರತ ಮೂಲದ 23 ವರ್ಷದ ವಿದ್ಯಾರ್ಥಿ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದಾನೆ. ಅದೇ ಕಾಲೇಜ್ ನಲ್ಲಿ ವಿದ್ಯಾರ್ಥಿ ಕೂಡ ಓದುತ್ತಿದ್ದಾಳೆ. ರಾಜರಾಜೇಶ್ವರಿನಗರದ ಪ್ಲಾಟ್ ನಲ್ಲಿ ಆರೋಪಿ ವಾಸವಾಗಿದ್ದು ಡಿಸೆಂಬರ್ 9 ರಂದು ವಿದ್ಯಾರ್ಥಿನಿ ಸೇರಿ ಎಲ್ಲಾ ಸಹಪಾಠಿಗಳನ್ನು ಮನೆಗೆ ಪಾರ್ಟಿಗೆ ಕರೆದಿದ್ದಾನೆ.

ತಡರಾತ್ರಿವರೆಗೂ ಎಲ್ಲ ಸೇರಿ ಮದ್ಯ ಸೇವಿಸಿ ಊಟ ಮಾಡಿ ಮಲಗಿದ್ದಾರೆ. ಯುವತಿ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದಾಗ ಆರೋಪಿ ಆಕೆಯ ರೂಮ್ ಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದ್ದು, ಯುವತಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...